ಅಭ್ಯತ್ ಮಂಗಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 44 ಲಕ್ಷ ರೂ. ಲಾಭ : ಕೋವಿಡ್ ಸಂದರ್ಭದಲ್ಲೂ ದಾಖಲೆಯ ವ್ಯವಹಾರ : ಪಿ.ಸಿ ಅಚ್ಚಯ್ಯ

ಸಿದ್ದಾಪುರ : ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಹಾರದಲ್ಲಿ 44ಲಕ್ಷ ರೂ. ಲಾಭ ಗಳಿಸಿ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಪಿ. ಸಿ ಅಚ್ಚಯ್ಯ ತಿಳಿಸಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಅಭ್ಯತ್ಮಂಗಲ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ 2ವರ್ಷಗಳಿಂದಲೂ ಲಾಭದ ಹಾದಿಯಲ್ಲಿ ಪ್ರಗತಿ ಸಾಧಿಸಿದ್ದು, ಕೋವಿಡ್ ಸಂದರ್ಭದಲ್ಲೂ ಅತ್ಯುತ್ತಮ ವ್ಯವಹಾರ ನಡೆಸಿ ಹೆಚ್ಚು ಲಾಭ ಗಳಿಸಿದೆ ಎಂದರು.
2018-19 ಸಾಲಿನಲ್ಲಿ 18 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ವರ್ಷ 21ಕೋಟಿ ತಲುಪಿದೆ. ಕಳೆದ ಸಾಲಿನಲ್ಲಿ 13ಕೋಟಿ ಠೇವಣಿ ಸಂಗ್ರಹವಾಗಿತ್ತು. ಈ ವರ್ಷ 15.76 ಲಕ್ಷಗುರಿ ಸಾಧಿಸಿದೆ. ಕಳೆದ ಸಾಲಿನಲ್ಲಿ ರಸಗೊಬ್ಬರ ವ್ಯಾಪರದಲ್ಲಿ 44 ಲಕ್ಷ ಆಗಿತ್ತು. ಈ ವರ್ಷ 96ಲಕ್ಷ ಗುರಿತಲುಪಿದೆ. ಸಂಘದಕಟ್ಟಡ ಸಾಲವನ್ನು ಸಂಪೂರ್ಣವಾಗಿ ಮರು ಪಾವತಿಸಿ ಡಿಸಿಸಿ ಬ್ಯಾಂಕಿನಲ್ಲಿ 60 ಲಕ್ಷ ಠೇವಣಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದಕಟ್ಟಡದಲ್ಲಿ ನೂತನವಾಗಿ ಹಾಡ್ರ್ವೇರ್ ವ್ಯವಹಾರ ಪ್ರಾರಂಭಿಸಿ 10 ಲಕ್ಷ ಬಂಡವಾಳ ಹೂಡಲಾಗಿದೆ. ಇದರೊಂದಿಗೆ ಲಾಕರ್ ಸೌಲಭ್ಯ, ಜರಾಕ್ಸ್, ಸ್ಟ್ಯಾಂಪ್ ಪೇಪರ್ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗೋದಾಮು ನಿರ್ಮಾಣ, ಮತ್ತಷ್ಟು ವ್ಯಾಪಾರ ಅಭಿವೃದ್ಧಿ ಹಲವು ಸೇವೆಗಳನ್ನು ವಿಸ್ತರಣೆ ಮಾಡಲು ಸಂಘವು ಮುಂದಾಗಿದ್ದು, ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ 1212 ಸದಸ್ಯರನ್ನು ಹೊಂದಿದ್ದು 17.59 ಲಕ್ಷ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ. 2019-20ನೇ ಸಾಲಿನಲ್ಲಿ 101ಕೋಟೆ ವ್ಯವಹಾರ ಮಾಡಿದ್ದು, ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ವಸಂತ್‍ಕುಮಾರ್ ಹೊಸಮನೆ, ಆಡಳಿತ ಮಂಡಳಿಯ ಸದಸ್ಯರಾದ ಟಿ.ಸಿ ಅಶೋಕ್, ಕೆ. ಎಂ. ಪ್ರಸನ್ನ, ಟಿ. ಬಿ ಗಣೇಶ್ ಟಿ. ಎ ಪ್ರಸನ್ನ, ಡಿ. ಜೆ. ಅಜಿತ್‍ಕುಮಾರ್, ಎಚ್. ಎಂ. ಧರ್ಮಲಿಂಗ, ವಿ. ಕೆ ಸುನೀಲ್‍ಕುಮಾರ್, ಹರಿಣಿ, ಸಧರ್ಮ ಮತ್ತಿತರರು ಉಪಸ್ಥಿತರಿದ್ದರು.

