ನಗರಸಭೆಯಿಂದ ಪೌರ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ

October 29, 2020

ಮಡಿಕೇರಿ ಅ.29 : ಕೋವಿಡ್-19 ಸಂಬಂಧ ಪೌರ ಕಾರ್ಮಿಕರಿಗೆ ನಗರಸಭೆ ವತಿಯಿಂದ ಜಾಗೃತಿ ಕಾರ್ಯಕ್ರಮವು ನಗರಸಭೆ ಕೌನ್ಸಲಿಂಗ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ತಾಲೂಕು ವೈದ್ಯಾಧಿಕಾರಿ ಡಾ.ಚೇತನ್ ಅವರು ಮಾಸ್ಕ್ ಬಳಕೆ ಮತ್ತು ಉಪಯೋಗದ ನಂತರ ಅದರ ವಿಲೇವಾರಿ ಮಾಡುವ ಕ್ರಮಗಳ ಬಗ್ಗೆ ಪೌರಕಾರ್ಮಿಕರಿಗೆ ಮಾಹಿತಿ ನೀಡಿದರು. ಜೊತೆಗೆ ಮಾಸ್ಕ್ ವಿಲೇವಾರಿ ಸಂದರ್ಭ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಈ ಸಂದರ್ಭ ಕೋವಿಡ್-19 ಪ್ರತಿಜ್ಞೆಯನ್ನು ಪೌರಕಾರ್ಮಿಕರಿಗೆ ಬೋಧಿಸಲಾಯಿತು. ನಗರಸಭೆ ಪೌರಾಯುಕ್ತರಾದ ರಾಮ್‍ದಾಸ್ ಅವರು ಪೌರಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನ್ನು ವಿತರಣೆ ಮಾಡಿದರು. ಆರೋಗ್ಯ ನಿರೀಕ್ಷಕರಾದ ಹರಿಣಿ ಇತರರು ಇದ್ದರು.

error: Content is protected !!