ಮಕ್ಕಳಿಗೆ ಆನ್‍ಲೈನ್ ಸ್ಪರ್ಧೆ

29/10/2020

ಮಡಿಕೇರಿ ಅ.29 : ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಇವರು ಮುಂಬರುವ ಮಕ್ಕಳ ದಿನಾಚರಣೆ ಅಂಗವಾಗಿ 14 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಆನ್‍ಲೈನ್ ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ. ಆಸಕ್ತ ಮಕ್ಕಳು ಮಕ್ಕಳ ಸಾಗಾಣಿಕೆ ವಿರುದ್ದ, ಮಕ್ಕಳ ಭಿಕ್ಷಾಟನೆ ವಿರುದ್ದ ಮತ್ತು ಜಾಲತಾಣ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕುರಿತಂತೆ ಪ್ರಬಂಧ, ಚಿತ್ರಕಲೆ, ಭಿತ್ತಿಪತ್ರ (ಪೋಸ್ಟರ್ಸ್) ಪದ್ಯಗಳು ಇವುಗಳನ್ನು ರಚಿಸಿ ಅವುಗಳ ಸಾಫ್ಟ್ ಪ್ರತಿಗಳನ್ನು dcp.childrenday2020@gmail.com ಇ-ಮೇಲ್ ವಿಳಾಸಕ್ಕೆ ನಿಗದಿತ ಅರ್ಜಿ ನಮೂನೆಯೊಂದಿಗೆ ನವೆಂಬರ್, 04 ರ ಸಂಜೆ 5.30 ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಯನ್ನುicps.karnataka.gov.in ಅಂತರ್ಜಾಲ ತಾಣದಲ್ಲಿ ಪಡೆಯಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.