ಕೋವಿಡ್ ಜಾಗೃತಿ : ಸುಂಟಿಕೊಪ್ಪ ಯುವ ಜೆಡಿಎಸ್ ನಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ

29/10/2020

ಮಡಿಕೇರಿ ಅ.29 : ಸುಂಟಿಕೊಪ್ಪ ನಗರ ಯುವ ಜೆಡಿಎಸ್ ವತಿಯಿಂದ ಸುಂಟಿಕೊಪ್ಪ ವ್ಯಾಪ್ತಿಯ ಸರ್ಕಾರಿ ಕಚೇರಿಗಳಿಗೆ ಉಚಿತ ಸ್ಯಾನಿಟೈಸರ್ ಹಾಗೂ ಸ್ಯಾನಿಟೈಸರ್ ಸ್ಟ್ಯಾಂಡ್ ನ್ನು ವಿತರಿಸಲಾಯಿತು.
ನಗರ ಯುವ ಜೆಡಿಎಸ್ ಅಧ್ಯಕ್ಷ ಪಿ.ಎ.ಇರ್ಷಾದ್ ಅಬ್ಬಾಸ್ ಅವರ ನೇತೃತ್ವದಲ್ಲಿ ಪೆÇಲೀಸ್ ಠಾಣೆ, ಪಂಚಾಯಿತಿ ಕಚೇರಿ ಮತ್ತು ನಾಡ ಕಚೇರಿಗೆ ಭೇಟಿ ನೀಡಿದ ಜೆಡಿಎಸ್ ಪ್ರಮುಖರು ಕೋವಿಡ್ ಸೋಂಕು ವ್ಯಾಪಿಸದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸ್ಯಾನಿಟೈಸರ್ ಹಾಗೂ ಸ್ಯಾನಿಟೈಸರ್ ಸ್ಟ್ಯಾಂಡ್ ನ್ನು ನೀಡಿದರು. ಇದೇ ಸಂದರ್ಭ ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಿದರು.
ನಗರ ಯುವ ಜೆಡಿಎಸ್ ಜಿಲ್ಲಾ ವಕ್ತಾರ ಜಿನಶುದ್ದಿನ್, ಹೋಬಳಿ ಅಧ್ಯಕ್ಷ ಶ್ರೀರಾಮ್ ಯಂಕನ, ನಗರ ಪ್ರಧಾನ ಕಾರ್ಯದರ್ಶಿ ಪಟ್ಟೆಮನೆ ತೀರ್ಥಪ್ರಸಾದ್, ಉಪಾಧ್ಯಕ್ಷ ಆರಿಸ್, ಯುವ ಮುಖಂಡರಾದ ನೌಶಾದ್, ಆಲಿ, ಅಕ್ಷಯ್, ಅಬು ತಾಹಿರ್, ತಾಹಿರ್, ಸಿಯಾಬ್, ಇರ್ಷಾದ್, ಇರ್ಫಾನ್, ಹಬೀಬ್ ಉಸ್ತಾದ್, ವಾಸಿಮ್ ಮತ್ತಿತರರು ಹಾಜರಿದ್ದರು.