ಪೊನ್ನಂಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭೂ ಸುಧಾರಣೆ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ

29/10/2020

ಮಡಿಕೇರಿ ಅ. 29 : ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಭೂ ಸುಧಾರಣೆ ಕಾಯ್ದೆ ಮತ್ತು ಆರ್.ಎಂ.ಸಿ ಕಾಯ್ದೆ ಕುರಿತು ಪೊನ್ನಂಪೇಟೆ ಬಿಜೆಪಿ ಕೃಷಿ ಮೋರ್ಚಾದ ವತಿಯಿಂದ ಅರಿವು ಕಾರ್ಯಕ್ರಮ ನಡೆಯಿತು.

ಪೊನ್ನಂಪೇಟೆ ಕೃಷಿ ಮೋರ್ಚದ ಅಧ್ಯಕ್ಷ ಅಡ್ಡಂಡ ನಿಲನ್ ಮಂದಣ್ಣ ಅವರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕಾಯ್ದೆ ತಿದ್ದುಪಡಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖರಾದ ಕೊಟೀರ ಕಿಶನ್ ಉತ್ತಪ್ಪ, ಮೂಕಳೇರ ಮಧು ಕುಮಾರ್, ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ಉಪಾಧ್ಯಕ್ಷ ಮಾಚೀಮಡ ಮಧು, ಕಾರ್ಯದರ್ಶಿ ತೊರೀರ ನವೀನ್, ತಾಲೂಕು ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಪೊನ್ನಂಪೇಟೆ ಕೃಷಿ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಮೂಕಳೇರ ದಿಲ್ ಕುಮಾರ್, ತಾಲೂಕು ಸಮಿತಿಯ ಸದಸ್ಯರಾದ ಮುದ್ದಿಯಡ ಮಂಜು ಗಣಪತಿ, ಬೊಟ್ಟಂಗಡ ದಶಮಿ, ಅಬ್ದುಲ್ಲಾ, ರಮೇಶ್, ಸುರೇಶ್ ಬೂತ್ ಅಧ್ಯಕ್ಷರಾದ ಕೆ.ಬಿ.ವಿನು,ಅಮ್ಮತೀರ ಸುರೇಶ್, ಮಹೇಶ್, ವಿಜು ಪಕ್ಷದ ಕಾರ್ಯಕರ್ತರು ಹಾಜರಿದ್ದರು.