ಹಾರಂಗಿ ಹಿನ್ನೀರಿನಲ್ಲಿ ಸೀಗಡಿ ಮೀನು ಮರಿಗಳ ಬಿತ್ತನೆ

October 29, 2020

ಮಡಿಕೇರಿ ಅ.29 : ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೀನುಗಾರಿಕೆ ಇಲಾಖೆಯಿಂದ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ 2.50 ಲಕ್ಷ ಸಂಖ್ಯೆ ಸಿಹಿ ನೀರು ಸೀಗಡಿ ಮೀನು ಮರಿಗಳನ್ನು ಗುರುವಾರ ಬಿತ್ತನೆ ಮಾಡಲಾಯಿತು. ಹಾರಂಗಿ ಜಲಾಶಯದ ಮೀನುಪಾಶುವಾರು ಹಕ್ಕನ್ನು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ಗುತ್ತಿಗೆ ಮೂಲಕ ನೀಡಲಾಗಿದೆ. ಸಹಕಾರ ಸಂಘದ ಬಡ ಮೀನುಗಾರರ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಲ್ಲಿ ಒಟ್ಟು ರೂ. 4.50 ಲಕ್ಷ ಮೌಲ್ಯದ ಸೀಗಡಿ ಮೀನು ಮರಿಗಳನ್ನು ಉಚಿತವಾಗಿ ಬಿತ್ತನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಣಿ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಕುಮಾರಸ್ವಾಮಿ, ಕೆ.ಟಿ. ದರ್ಶನ, ಸಚಿನ್, ಮಂಜುನಾಥ ಹಾಗೂ ಇಲಾಖಾ ಸಿಬ್ಬಂದಿ ಮತ್ತು ಇತರರು ಇದ್ದರು.