ರಾಜ್ಯೋತ್ಸವಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ

October 30, 2020

ಮಡಿಕೇರಿ ಅ.29 : ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಡ್) ಸ್ವಚ್ಛತೆ ಕಾರ್ಯ ಮತ್ತು ಕಾಡು ಕಡಿಯುವ ಕೆಲಸ ಭರದಿಂದ ಸಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಗುರುವಾರ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಜೊತೆಗೆ ಅ.31 ರಂದು ನಡೆಯಲಿರುವ ಸುಬೇದಾರ್ ಅಪ್ಪಯ್ಯ ಗೌಡ ಅವರ ಹುತಾತ್ಮ ದಿನಾಚರಣೆಯ ಅಂಗವಾಗಿ ನಗರದ ಸುದರ್ಶನ ವೃತ್ತದಲ್ಲಿರುವ ಸುಬೇದಾರ್ ಅಪ್ಪಯ್ಯ ಗೌಡ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಸಿದ್ದತಾ ಕಾಮಗಾರಿಗಳನ್ನು ಪೌರಾಯುಕ್ತರು ವೀಕ್ಷಿಸಿದರು. ಆರೋಗ್ಯ ನಿರೀಕ್ಷಕರಾದ ಹರಿಣಿ ಇತರರು ಹಾಜರಿದ್ದರು.

error: Content is protected !!