ಸಿಲಿಂಡರ್ ಬುಕಿಂಗ್ : ಒಂದೇ ಸಂಖ್ಯೆಯ ಸೇವೆ

30/10/2020

ಬೆಂಗಳೂರು ಅ.30 : ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್ ಬುಕಿಂಗ್ ಗೆ 7718955555 ಆಗಿದ್ದು, ಗ್ರಾಹಕರಿಗೆ ಈ ಸೇವೆ 24*7 ಲಭ್ಯವಿರುತ್ತದೆ.
ಅಖಿಲ ಭಾರತ ಮಟ್ಟದಲ್ಲಿ ಎಲ್.ಪಿ.ಜಿ. ಬುಕ್ಕಿಂಗ್ ನ್ನು ಒಂದೇ ಸಂಖ್ಯೆಯಲ್ಲಿ -ಎಸ್.ಎಂ.ಎಸ್. ಮತ್ತು ಐವಿಆರ್.ಎಸ್.- ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್.ಪಿ.ಜಿ. ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲತೆ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ. ಇದರಿಂದಾಗಿ ಗ್ರಾಹಕರು ಒಂದು ದೂರಸಂಪರ್ಕ ವೃತ್ತದಿಂದ ಮತ್ತೊಂದಕ್ಕೆ, ಅಥವಾ ಯಾವುದೇ ರಾಜ್ಯಕ್ಕೆ ಹೋದರೂ, ಅವರ ಇಂಡೇನ್ ಮರುಪೂರಣ ಸಿಲಿಂಡರ್ ಬುಕಿಂಗ್ ಸಂಖ್ಯೆ ಒಂದೇ ಆಗಿರುತ್ತದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಇಂಡೇನ್ ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು, ಇದು 31.10.2020ರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗಲಿದೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಸಮಾನ ಸಂಖ್ಯೆ ಅಂದರೆ 7718955555, ಜಾರಿಗೆ ಬರುತ್ತದೆ.