ಕಲ್ಯಾಣ್ ದಾಂಪತ್ಯ ವಿವಾದ : ಮಹಿಳೆ ಸಾವು

30/10/2020

ಕೊಪ್ಪಳ ಅ.30 : ಸ್ಯಾಂಡಲ್ ವುಡ್ ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಹುಳಿ ಹಿಂಡಿದ ಆರೋಪ ಎದುರಿಸುತ್ತಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಪತ್ತೆಯಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮರಾಠಿ ಭಾಷೆಯಲ್ಲಿ ಗಂಗಾ ಕುಲಕರ್ಣಿ ಡೆತ್ನೋ ಟ್ ಬರೆದಿಟ್ಟು, ನ್ಯಾಯಾಧೀಶರು ಹಾಗೂ ವಕೀಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ. ನನ್ನ ಮೇಲೆ ಪ್ರಕರಣಗಳು ದಾಖಲಾಗಿವೆ. ನನಗೆ ಇಬ್ಬರೂ ಮಕ್ಕಳಿದ್ದಾರೆ. ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ನನ್ನ ಮಕ್ಕಳ ಜವಾಬ್ದಾರಿ ನಿಮ್ಮದು ಎಂದು ನ್ಯಾಯಾಧೀಶರು ಮತ್ತು ವಕೀಲರಿಗೆ ಮನವಿ ಮಾಡಿದ್ದಾರೆ.
ಇಂದು ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.