ಭಾರತದ ಕ್ಷಮೆ ಕೋರಿದ ಟ್ವಿಟರ್ ಸಂಸ್ಥೆ

October 30, 2020

ನವದೆಹಲಿ ಅ.30 : ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.
ಈ ಕುರಿತಂತೆ ಭಾರತದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆಯ ವಕ್ತಾರರು ಮೌಖಿಕ ಕ್ಷಮೆಯಾಚಿಸಿದ್ದು, ಲಿಖಿತ ಉತ್ತರದಲ್ಲಿ ಈ ಕ್ಷಮೆ ಕೋರಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಟ್ವಿಟ್ಟರ್ ವಕ್ತಾರರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅಂತೆಯೇ ಟ್ವಿಟರ್ ವಕ್ತಾರರು ಸಲ್ಲಿಕೆ ಮಾಡಿರುವ ಈ ಪತ್ರವನ್ನು ಜಂಟಿ ಸಂಸದೀಯ ಸಮಿತಿ ಸ್ವೀಕರಿಸಿದೆ.
ಈ ಹಿಂದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿತ್ತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ಕೂಡ ನೀಡಿತ್ತು.

error: Content is protected !!