ಮಡಿಕೇರಿಯಲ್ಲಿ ಫೋವ್ ಆ್ಯಪ್ ಲೋಕಾಪ೯ಣೆ

30/10/2020

ಮಡಿಕೇರಿ ಅ. 30 : ಆನ್ ಲೈನ್ ಮೂಲಕ ಹೋಟೇಲ್ ಗಳಿಂದ ಆಹಾರ ಪದಾಥ೯ಗಳನ್ನು ಮನೆಗಳಿಗೆ ತಲುಪಿಸುವ ಪೋವ್ ಸಂಸ್ಥೆಯನ್ನು ಉದ್ಘಾಟಿಸಿ, ಫೋವ್ ಆನ್ ಲೈನ್ ಅ್ಯಪ್ ಗೆ ಮಡಿಕೇರಿಯಲ್ಲಿ ಉದ್ಯಮಿ ಕೇಶವಪ್ರಸಾದ್ ಮುಳಿಯ ಚಾಲನೆ ನೀಡಿದರು.

ನಗರದ ಕಾವೇರಿ ಹಾಲ್ ಹೊರಾಂಗಣದಲ್ಲಿ ಜರುಗಿದ ಕಾಯ೯ಕ್ರಮದಲ್ಲಿ ಮಡಿಕೇರಿಯನ್ನು ಕೇಂದ್ರವಾಗಿರಿಸಿಕೊಂಡು ಕೊಡಗಿನ ಯುವಕರೇ ಪ್ರಾರಂಭಿಸಿದ ಫೋವ್ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಲೋಕಾಪ೯ಣೆಗೊಳಿಸಿ ಮಾತನಾಡಿದ ಮುಳಿಯ ಜ್ಯುವೆಲ್ಲರ್ಸ್ ನ ವ್ಯವಸ್ಥಾಪಕ ನಿದೇ೯ಶಕ ಕೇಶವ ಪ್ರಸಾದ್ ಮುಳಿಯ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಕಾಲಿಕ ಯೋಜನೆ ಇದಾಗಿದೆ. ಮಡಿಕೇರಿಯಲ್ಲಿಯೇ ಕೇಂದ್ರ ಸ್ಥಾನವಾಗಿರಿಸಿಕೊಂಡು ಬೇರೆ ಬೇರೆ ಕಡೆ ವಹಿವಾಟು ವೖದ್ದಿಸುವ ಅವಕಾಶವೂ ಈ ಉದ್ಯಮಕ್ಕಿದೆ. ಆದರೆ, ಈ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಇರುವ ಸಿಬ್ಬಂದಿಗಳು ಶ್ರಮದಿಂದ ಕಾಯ೯ನಿವ೯ಹಿಸಿದ್ದೇ ಆದಲ್ಲಿ ಇಂಥ ಸಂಸ್ಥೆ ಖಂಡಿತಾ ಯಶಸ್ಸಿಯಾದೀತು ಎಂದೂ ಕೇಶವ ಪ್ರಸಾದ್ ಹೇಳಿದರು.

ಕೊಡಗು ಜಿಲ್ಲಾ ಹೋಟೇಲ್ , ರೆಸ್ಟೋರೆಂಟ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ ಪ್ರಸಾದ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಿಗೂ ಉದ್ಯೋಗದ ಕೊರತೆ ಕಾಡುತ್ತಿದೆ. ಕೊಡಗಿನ ಯುವಪೀಳಿಗೆಗೆ ಇಲ್ಲಿಯೇ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಇದು, ನಾನಾ ಅವಕಾಶಗಳನ್ನು ಸಮಪ೯ಕವಾಗಿ ಬಳಸಿಕೊಳ್ಳಿ. ಬೇರೆ ಬೇರೆ ಊರುಗಳಿಂದ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿ ಕೊಡಗಿಗೆ ಬಂದಿದ್ದಾರೆ. ಅಂಥವರಿಗೆ ಸೂಕ್ತ ಉದ್ಯೋಗವಕಾಶ ಕಲ್ಪಿಸಬೇಕಾಗಿದೆ. ಚಿಕ್ಕ ಪ್ರಮಾಣದಲ್ಲಿ ಸಂಸ್ಥೆಗಳನ್ನು ಪ್ರಾರಂಭಿಸಿ ಹೆಮ್ಮರವಾಗಿ ಬೆಳೆಸುವಂತಾಗಬೇಕೆಂದು ಕಿವಿಮಾತು ಹೇಳಿದ ನಾಗೇಂದ್ರ ಪ್ರಸಾದ್, ನಿರುದ್ಯೋಗಿಗಳಿಗೆ ಕೇಂದ್ರ ಸಕಾ೯ರ ಸಾಕಷ್ಟು ಸವಲತ್ತು ನೀಡುತ್ತಿದ್ದು ಇದನ್ನು ಯುವಪೀಳಿಗೆ ಸದುಪಯೋಗಪಡಿಸಿಕೊಳ್ಳಬೇಕೆಂದೂ ಹೇಳಿದರು.

ಕೊಡಗು ಜಿಲ್ಲೆಯ ರೆಸ್ಟೋರೆಂಟ್ ಗಳಿಗೆ ಈ ವಿನೂತನ ಯೋಜನೆ ಖಂಡಿತಾ ಉಪಯೋಗಕಾರಿ ಎಂದೂ ನಾಗೇಂದ್ರ ಪ್ರಸಾದ್ ಶ್ಲಾಘಿಸಿದರು.

ಪತ್ರಕತ೯, ಹೊಟೇಲ್ ಅಸೋಸಿಯೇಷವ್ ಸಲಹೆಗಾರ ಅನಿಲ್ ಎಚ್.ಟಿ. ಮಾತನಾಡಿ, ಸ್ಲಾಭಿಮಾನಿ, ಸ್ವಾವಲಂಭಿ ಯೋಜನೆಗಳು ಭವಿಷ್ಯದ ಭಾರತದ ಆಧಾರ ಸ್ಥಂಭಗಳಾಗಿದ್ದು, ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಅತ್ಯಗತ್ಯವಾಗಿದ್ದ ಜಿಲ್ಲೆಯವರಿಂದಲೇ ರೂಪುಗೊಂಡ ಈ ಗ್ರಾಹಕ ಸೇವೆ ನಿಜಕ್ಕೂ ಅಗತ್ಯವಾಗಿತ್ತು ಎಂದರು. ಯಾವುದೇ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದಲ್ಲಿ ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಯಾವುದೇ ಗುರಿಯ ಸಾಧನೆಗೆ ಅಡ್ಡಮಾಗ೯ ಹಿಡಿಯದೇ ಪ್ರಾಮಾಣಿಕ ಕೆಲಸದ ಮೂಲಕ ಯೋಜಿತ ಗುರಿಯನ್ನು ತಲುಪಬಹುದು ಎಂದು ಸಲಹೆ ನೀಡಿದರು. ಕೊಡಗಿನಲ್ಲಿರುವ ಉತ್ಸಾಹಿ ಯುವಕ, ಯುವತಿಯರೂ ಮುಂದಿನ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಹೊಸ ಯೋಜನೆಯ ಬಗ್ಗೆ ಚಿಂತನೆ ಹರಿಸುವಂತೆಯೂ ಅನಿಲ್ ಎಚ್.ಟಿ, ಸೂಚಿಸಿದರು.

ಹೋಟೇಲ್ ಉದ್ಯಮಿ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ ಮಾತನಾಡಿ, ಜಾಗತಿಕ ಮಟ್ಟದ ಸಂಸ್ಥೆಗಳನ್ನು ವಹಿವಾಟಿನಲ್ಲಿ ಮಾದರಿಯಾಗಿರಿಸಿಕೊಂಡರೆ ಖಂಡಿತಾ ಯಶಸ್ಸು ಸುಲಭಸಾಧ್ಯ ಎಂದು ಸಲಹೆ ನೀಡಿದರು. ಪ್ರಾರಂಭಿಕ ದಿನಗಳಲ್ಲಿ ಗ್ರಾಹಕರನ್ನು ಹೆಚ್ಚು ಮಾಡುವತ್ತ ನಿಗಾ ವಹಿಸಬೇಕೇ ವಿನಾ ಹಣ ಮಾಡುವುದನ್ನೇ ಮುಖ್ಯ ಗುರಿಯಾಗಿರಿಸಿಕೊಳ್ಳಬೇಡಿ ಎಂದೂ ದಿನೇಶ್ ಕಾಯ೯ಪ್ಪ ಹೇಳಿದರು. ಮೊದಲ ಮೂರು ತಿಂಗಳು ಮಡಿಕೇರಿಯನ್ನೇ ಕೇಂದ್ರೀಕರಿಸಿ ವಹಿವಾಟು ಕೈಗೊಳ್ಳಿ ಎಂದು ದಿನೇಶ್ ಸಲಹೆ ನೀಡಿದರು.

ಯುವ ಉದ್ಯಮಿ ಪೂಳಕಂಡ ಎಂ.ರಾಜೇಶ್ ಮಾತನಾಡಿ. ಇಂಥ ಅ್ಯಪ್ ಕೊಡಗಿಗೆ ಅಗತ್ಯವಾಗಿತ್ತು. ಈ ಮೂಲಕ ಜಿಲ್ಲೆಯ ಜನತೆಗೆ ಸ್ಥಳೀಯ ಯುವಕರ ತಂಡದ ಗ್ರಾಹಕ ಸೇವೆ ದೊರಕುತ್ತಿದೆ ಎಂದರು.

ಹೋಟೇಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಾಹೀರ್ ಅಹಮ್ಮದ್ ಮಾತನಾಡಿ, ಉತ್ತಮ ಸೇವೆ ನೀಡಿದ್ದಲ್ಲಿ ಎಲ್ಲ ರಂಗದಲ್ಲಿಯೂ ಯಶಸ್ಸು ಸಾಧ್ಯವಿದೆ ಎಂದರು.

ಸಂಸ್ಥೆಯ ಪಾಲುದಾರ ಜಯಪ್ರಕಾಶ್ ಮಾತನಾಡಿ, ಈ ಅ್ಯಪ್ ಮೂಲಕ ಮಡಿಕೇರಿಗೆ ಪ್ರಾರಂಭಿಕವಾಗಿ ಗ್ರಾಹಕ ಸೇವೆ ಕೈಗೊಳ್ಳಲು ಉದ್ದೇಶಿಸಲಾಗಿದ್ದು ನಂತರದ ದಿನಗಳಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿಯೂ ಸೇವೆ ನೀಡುವ ಚಿಂತನೆಯಿದೆ. ಈಗಾಗಲೇ ಕೊಡಗಿನ 20 ಯುವಕ,ಯುವತಿಯರಿಗೆ ಸಂಸ್ಥೆಯಲ್ಲಿ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಪಾಲುದಾರ ಅನು ವಗೀ೯ಸ್ ವೇದಿಕೆಯಲ್ಲಿದ್ದರು, ಚೋಕಿರ ಅನಿತಾ ನಿರೂಪಿಸಿದರು.