ಮಾಧ್ಯಮ ಸ್ಪಂದನ ತಂಡದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಆರ್ಥಿಕ ನೆರವು

30/10/2020

ಮಡಿಕೇರಿ ಅ.30 : ಮಾಧ್ಯಮ ಸ್ಪಂದನ ತಂಡದ ಮನವಿಗೆ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಕೊಡಗಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಉನ್ನತ ವಿದ್ಯಾಭ್ಯಾಸಕ್ಕೆ ಇದ್ದ ಆರ್ಥಿಕ ತೊಡಕು ನಿವಾರಣೆ ಆಗಿದೆ.

ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ನಿವಾಸಿ ಬಾಲಕೃಷ್ಣ ಅವರ ಪುತ್ರಿ ಬಿ.ಬಿ. ನಿಶ್ಮಿತಾ ಇದೀಗ ಮೂಡಬಿದಿರೆಯ ಆಳ್ವಾಸï ವಿದ್ಯಾಸಂಸ್ಥೆಯಲ್ಲಿ ಬಿಕಾಂ/ ಸಿಎ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆಂದು ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಖುದ್ದು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಬಳಿಕ ಆರ್ಥಿಕ ಸಮಸ್ಯೆ ಇರುವುದನ್ನು ತಂಡದ ಗಮನಕ್ಕೆ ತಂದಿದ್ದರು. ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ದಾನಿಗಳಿಂದ ಒಟ್ಟು 85,600 ರೂಪಾಯಿ ಸಂದಾಯವಾಗಿದೆ. ಶೇ.97 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದರಿಂದ ಆಳ್ವಾಸ್ ವಿದ್ಯಾಸಂಸ್ಥೆ ಶುಲ್ಕದಲ್ಲಿ ಗಣನೀಯ ಇಳಿಕೆ ಮಾಡಿದೆ.

ಜರ್ಮನಿ, ದುಬೈ, ಮುಂಬೈನಲ್ಲಿ ನೆಲೆಸಿರುವ ಕೊಡಗು ಮೂಲದ ವರು ಕೂಡ ಆರ್ಥಿಕ ನೆರವು ನೀಡಿರುವುದು ವಿಶೇಷ. ಪತ್ರಕರ್ತರು ಸೇರಿದಂತೆ ದಾನಿಗಳು ಆರ್ಥಿಕ ನೆರವು ನೀಡು ವುದರ ಮೂಲಕ ಕಷ್ಟ ಕಾಲದಲ್ಲಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ಮಾಧ್ಯಮ ಸ್ಪಂದನ ತಂಡದ ಕರೆಗೆ ಸ್ಪಂದಿಸಿ, ಆರ್ಥಿಕ ನೆರವು ನೀಡಿದ ದಾನಿಗಳಿಗೆ ಪ್ರೀತಿಯ ವಂದನೆ. ಬಿ.ಬಿ. ನಿಶ್ಮಿತಾ ಉನ್ನತ ಶ್ರೇಣಿಯಲ್ಲಿ ಉನ್ನತ ಶಿP್ಷÀಣ ಪಡೆಯುವುದರೊಂದಿಗೆ ಕೊಡಗಿಗೆ ಕೀರ್ತಿ ತರಲಿ ಎಂದು ಸುದ್ದ ಮನಸ್ಸಿನಿಂದ ಶುಭ ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.