ಸೋಮವಾರಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಈದ್ ಮಿಲಾದ್

30/10/2020

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಈದ್ ಮಿಲಾದ್ ಹಬ್ಬವನ್ನು ಗುರುವಾರ ಮತ್ತು ಶುಕ್ರವಾರ ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು
ಈದ್ ಮಿಲಾದ್ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಸೋಮವಾರಪೇಟೆಯ ಜಲಾಲಿಯ, ಜಾಮಿಯಾ ಬಜೆಗುಂಡಿಯ ಕಿಳಾರಿಯ ಮಸೀದಿಗಳಲ್ಲಿ ಆಚರಿಸಲಾಯಿತು.
ಕಾಗಡಿಕಟ್ಟೆ, ತಣ್ಣೀರುಹಳ್ಳ, ಹೊಸತೋಟ, ಕಲ್ಕಂದೂರು, ಮಾದಾಪುರದ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿತು.
ಕರೊನಾ ಹಿನ್ನೆಲೆ ಈ ಬಾರಿಯ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆಗಳು ಸೇರಿದಂತೆ ದಫ್ ಕಾರ್ಯಕ್ರಮ ನಡೆಸಲಿಲ್ಲ ಎಂದು ಬಜೆಗುಂಡಿ ಕಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ. ಯಾಕುಬ್ ಹೇಳಿದರು.