ಸುಂಟಿಕೊಪ್ಪ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವಲಯಾಧ್ಯಕ್ಷರಾಗಿ ಆಲಿಕುಟ್ಟಿ ಆಯ್ಕೆ

30/10/2020

ಸುಂಟಿಕೊಪ್ಪ ಅ.30 : ಸುಂಟಿಕೊಪ್ಪ ಕಾಂಗ್ರೆಸ್ ಅಲ್ಪಸಂಖ್ಯಾತರ ವಲಯಾಧ್ಯಕ್ಷರಾಗಿ ಆಲಿಕುಟ್ಟಿ, ನಗರ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ರಫೀಕ್.ಎಚ್ ಅವರನ್ನು ನೇಮಕಗೊಳಿಸಲಾಯಿತು.
ಕಾಂಗ್ರೆಸ್ ಕಛೇರಿಯಲ್ಲಿ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರುಗಳನ್ನು ಜಿಲ್ಲಾ ವಲಯಾಧ್ಯಕ್ಷರಾಗಿ ಆಲಿಕುಟ್ಟಿ, ನಗರ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ರಫೀಕ್ ಎಚ್, ಜಿಲ್ಲಾ ಮಹಿಳಾ ಅಲ್ಪಸಂಖ್ಯಾತರ ಘಟಕಕ್ಕೆ ರೋಸ್‍ಮೇರಿ ರಾಡ್ರಿಗಸ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಅಂಬಚ್ಚು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸಂಯೋಜಕರಾಗಿ ನಯಾಜ್ (ಭೀಮ) ಅವರುಗಳನ್ನು ನೇಮಕಗೊಳಿಸಲಾಯಿತು.
ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಕೆ.ಪೆಮ್ಮಯ್ಯ ಪಕ್ಷದ ಶೆಲ್ಯ ಹೊದೆಸಿ ಆದೇಶ ಪ್ರತಿಯನ್ನು ಪಕ್ಷದ ಅಧಿಕಾರ ನೀಡಿದರು.
ಈ ಸಂದರ್ಭ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ, ಪಂಚಾಯಿತಿ ಮಾಜಿಅಧ್ಯಕ್ಷ ಪಿ.ಎಫ್.ಸಬಾಸ್ಟೀನ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಪಿ.ಆರ್.ಸುಕುಮಾರ್, ಪಕ್ಷದ ಕಾರ್ಯಕರ್ತರಾದ ರಫೀಕ್,ಕಾರ್ಲೋಸ್, ಜೈಸನ್, ಸಿದ್ದಿಕ್, ರಮೀಜ್, ರಾಶಿದ್, ಬಶಿರ್, ಮುತ್ತಲೀಬ್, ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಅಕಿಮ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.