ಬಿಜೆಪಿ ಪ್ರಮುಖರ ಹತ್ಯೆಯಲ್ಲಿ ಲಷ್ಕರ್ ಕೈವಾಡ

31/10/2020

ಶ್ರೀನಗರ ಅ.31 : ಕುಲ್ಗಾಮ್ ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರರ ಕೈವಾಡವಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಉಗ್ರರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್ ಇಟೂ, ಇನ್ನಿಬ್ಬರು ಕಾರ್ಯಕರ್ತರಾದ ಉಮರ್ ಹಜಾಮ್ ಹಾಗೂ ಹರೂನ್ ರಶೀದ್ ಬೇಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಎಲ್‍ಇಟಿಯ ಛದ್ಮ ಸಂಘಟನೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ ಎಫ್) ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಗೆ ಬಳಕೆ ಮಾಡಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಾಕಿಸ್ತಾನದ ಆಣತಿಯಂತೆ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.