ನಟ ದರ್ಶನ್ ಭರ್ಜರಿ ಪ್ರಚಾರ
31/10/2020

ಬೆಂಗಳೂರು ಅ.31 : ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಪ್ರಚಾರಕ್ಕೆ ತಾರಾ ಮೆರುಗು ಸಿಕ್ಕಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಹಾಗೂ ನಟಿ ಅಮೂಲ್ಯ ಅವರು ಶುಕ್ರವಾರ ಭರ್ಜರಿ ಮತ ಬೇಟೆ ನಡೆಸಿದ್ದಾರೆ.
ಅಭಿಮಾನಿಗಳತ್ತ ಕೈ ಬೀಸಿ ಮುನಿರತ್ನ ಪರ ದರ್ಶನ್ ಹಾಗೂ ಅಮೂಲ್ಯ ಮತಯಾಚನೆ ಮಾಡಿದರು. ಜೊತೆಗೆ, ರ್ಯಾಲಿಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಕೂಡ ಭಾಗಿಯಾಗಿರುವುದು ಕಂಡು ಬಂದಿದೆ. ದರ್ಶನ್ ಹಾಗೂ ಅಮೂಲ್ಯ ಇಬ್ಬರಿಗೂ ಬೌನ್ಸರ್ಸ್ ಹಾಗೂ ಪೊಲೀಸರು ಫುಲ್ ಭದ್ರತೆ ನೀಡಲಾಗಿದೆ.
ಪ್ರಚಾರಕ್ಕೆ ಬಂದಿರುವ ದರ್ಶನ್ ಹಾಗೂ ನಟಿ ಅಮೂಲ್ಯ ಅವರನ್ನು ನೋಡಲು ರಸ್ತೆಯಲ್ಲಿ ಸಾವಿರಾರು ಅಭಿಮಾನಿಗಳು ಕಿಕ್ಕಿರಿದಿದ್ದಾರೆ. ರ್ಯಾಲಿ ವೇಳೆ ರಸ್ತೆ ಮಧ್ಯದಲ್ಲಿ ದರ್ಶನ್‍ಗೆ ಮಹಿಳೆಯರು ಆರತಿ ಮಾಡಿದ್ದಾರೆ. ಕ್ಷೇತ್ರದ ಬಿ.ಕೆ. ನಗರದ ಮೂಲಕ ಜೆ.ಪಿ. ಪಾರ್ಕ್ ಕಡೆ ರ್ಯಾಲಿ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
