ಸೀರತ್ ಅಭಿಯಾನದ ಅಂಗವಾಗಿ ಪ್ರಬಂಧ ಸ್ಪರ್ಧೆ

October 31, 2020

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯವ್ಯಾಪಿಯಾಗಿ ಆಚರಿಸಲ್ಪಡುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಈ ಕೆಳಗಿನ ವಿಭಾಗದವರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ಪ್ರಥಮ), 10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ದ್ವಿತೀಯ), 5 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ತೃತೀಯ) ಬಹುಮಾನವಾಗಿ ನೀಡಲಾಗುವುದು. ಅಲ್ಲದೇ, ತೀರ್ಪುಗಾರರ ಮೆಚ್ಚುಗೆ ಪಡೆದ ಇತರ ಪ್ರಬಂಧಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಗುವುದು.
ವಿಭಾಗ-1: ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ
ವಿಷಯ: ‘ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ’
ವಿಭಾಗ-2: ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ
ವಿಷಯ: ‘ಪ್ರವಾದಿ ಮುಹಮ್ಮದ್(ಸ)ರ ಸಾಮಾಜಿಕ ನ್ಯಾಯದ ಪರಿಕಲ್ಪನೆ’
ವಿಭಾಗ-3: ಶಿಕ್ಷಕರು ಹಾಗೂ D.Ed. / B.Ed. / M.Ed. ವಿದ್ಯಾರ್ಥಿಗಳಿಗೆ
ವಿಷಯ: ‘ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ’

ಆಸಕ್ತರು ತಮ್ಮ ಬರಹಗಳನ್ನು ಫುಲ್‍ಸ್ಕೇಪ್ ಬಿಳಿಹಾಳೆಯ ಒಂದೇ ಮಗ್ಗುಲಲ್ಲಿ 8 ಪುಟಗಳಿಗೆ ಮೀರದಂತೆ ತಮ್ಮ ಅಧಿಕೃತ ದಾಖಲೆಗಳ ಪ್ರತಿಗಳೊಂದಿಗೆ ವಿಭಾಗವನ್ನು ನಮೂದಿಸಿ ಭಾವಚಿತ್ರದೊಂದಿಗೆ 2020 ಡಿಸೆಂಬರ್ 10ರೊಳಗೆ ಪ್ರಬಂಧ ಸ್ಪರ್ಧಾ ಸಮಿತಿ, ಪ್ರವಾದಿ ಮುಹಮ್ಮದ್(ಸ) ಸೀರತ್ ಅಭಿಯಾನ-2020, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ವಿಳಾಸದಲ್ಲಿ ಕಳುಹಿಸಿ ಕೊಡಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಸರ್ವಧರ್ಮೀಯರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಸ್ಪರ್ಧಾ ನಿಯಮಗಳ ಹೆಚ್ಚಿನ ಮಾಹಿತಿಗಳಿಗಾಗಿ (9448122361, 9845665198, (0824) 2422786) ಸಂಪರ್ಕಿಸಬೇಕೆಂದು ಸಂಘಟಕರು ಕೋರಿದ್ದಾರೆ.

error: Content is protected !!