“ಪ್ರೀತಿಯ ಪ್ರವಾದಿ” ಆನ್ಲೈನ್ ಕಾರ್ಯಕ್ರಮದ ಸಮಾರೋಪ ಸಮಾರಂಭ

October 31, 2020

ಮಡಿಕೇರಿ ಅ.31 : ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ.ಅ) ರವರ ಜನ್ಮದಿನದ ಅಂಗವಾಗಿ ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ ಕಳೆದ ಹನ್ನೆರಡು ದಿನಗಳಿಂದ ನಡೆದ “ಪ್ರೀತಿಯ ಪ್ರವಾದಿ” ಆನ್ಲೈನ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಪ್ರವಾದಿಯವರ ಜೀವನದ ಸಮಗ್ರ ಹಾಗೂ ಸಂಪೂರ್ಣ ವಿಷಯಗಳನ್ನೊಳಗೊಂಡ ಧಾರ್ಮಿಕ ತರಗತಿಗಳು, ಭಾಷಣ, ಪ್ರವಾದಿ ಕೀರ್ತನೆಗಳು ಹೀಗೆ ಹತ್ತು ಹಲವು ವಿಧಗಳಲ್ಲಿ ಪ್ರತಿದಿನ ಕಾರ್ಯಕ್ರಮ ನಡೆಯಿತು.

ಹನ್ನೆರಡು ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಧಾರ್ಮಿಕ ವಿದ್ವಾಂಸರು ಹಾಗೂ ಪಂಡಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭ ವೆಬಿನಾರ್ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಮುಖ್ಯ ಭಾಷಣಗಾರರಾಗಿ ಕೇಂದ್ರ ಜುಮಾ ಮಸೀದಿ ವಿರಾಜಪೇಟೆ ಇಲ್ಲಿನ ಮುಖ್ಯ ಧರ್ಮ ಗುರುಗಳಾದ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಉಪಾಧ್ಯಕ್ಷರಾದ ಝೈನುದ್ಧೀನ್ ಉಸ್ತಾದ್ ವಹಿಸಿದ್ದರು. ಎಸ್.ಕೆ .ಎಸ್ ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಸಿಸಿ ಕೊಡಗು ದಹ್ವಾ ವಿಭಾಗದ ಅಧ್ಯಕ್ಷರಾದ ಸಿದ್ದೀಕ್ ಬಾಖವಿ,ಜಿಸಿಸಿ ಕೊಡಗು ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಎಸ್.ಕೆ .ಎಸ್ ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ, ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಬಾತಿಷ ಶಂಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರೋಪ ಪ್ರಾರ್ಥನೆಯನ್ನು ಉಬೈದುಲ್ಲಾ ತಂಙಳ್ ಮೇಲಾಟೂರ್ ಅಧ್ಯಕ್ಷರು- ಎಸ್.ಐ.ಸಿ ಸೌದಿ ರಾಷ್ಟ್ರೀಯ ಸಮಿತಿ ಇವರು ನೆರವೇರಿಸಿದರು. ಆಬಿದ್ ಕಣ್ಣೂರ್ ಪ್ರವಾದಿಯವರ ಬಗ್ಗೆ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ಸ್ವಾಗತಿಸಿದರು. ಎಸ್.ಕೆ .ಎಸ್ ಎಸ್.ಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ಲ ಫ್ಲೈ ಕೂರ್ಗ್, ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್ ನೆಲ್ಲಿಯಹುದಿಕೇರಿ, ಸದಸ್ಯರುಗಳಾದ ರಶೀದ್ ಇ ಪಿ ತ್ಯಾಗತ್ತೂರ್,ಬಶೀರ್ ಚೇರಂಭಾಣೆ, ಕಮರುದ್ದೀನ್ ವಿರಾಜಪೇಟೆ,ಅಶ್ಫಾಕ್ ಕೊಡ್ಲಿಪೇಟೆ ಹಾಗೂ ಜಿಸಿಸಿ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬಜೆಗುಂಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಹಲವು ನಾಯಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿ, ಜಿಸಿಸಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ವಿರಾಜಪೇಟೆ ವಂದಿಸಿದರು.