ವಿರಾಜಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸೇರ್ಪಡೆ

31/10/2020

ಮಡಿಕೇರಿ ಅ.31 : ಬೊಳ್ಳುಮಾಡು ಗ್ರಾಮದ ಕೊಪ್ಪಿರ ರುಮ್ಮಿ ದೇವಯ್ಯ ತಮ್ಮ ಸಂಗಡಿಗರೊಂದಿಗೆ ಬಿಜೆಪಿ ತೊರೆದು ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿರಾಜಪೇಟೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಪಕ್ಷದ ಶಾಲು ಹೊದಿಸಿ ಬಿಜೆಪಿ ಕಾರ್ಯಕರ್ತರನ್ನು ಬರ ಮಾಡಿಕೊಂಡರು.
ನಂತರ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಪಕ್ಷಕ್ಕೆ ಬರುವ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷ ಸ್ವಾಗತಿಸಲಿದೆ ಎಂದರು.

ಕೊಪ್ಪಿರ ರುಮ್ಮಿ ದೇವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಕಾರ್ಯವೈಖರಿ ಮತ್ತು ರೈತ ವಿರೋಧಿ ನೀತಿ ಹಾಗೂ ಕೋವಿಡ್ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕಾಣದಿರುವುದು ಬೇಸರ ತಂದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ತೋರಿದ ಕಾಳಜಿ, ಕೊಡಗಿನ ಕುಶಾಲನಗರ ಹಾಗೂ ಪೆÇನ್ನಂಪೇಟೆ ಪ್ರತ್ಯೇಕ ತಾಲ್ಲೂಕು ರಚನೆ, ಅಲ್ಲದೆ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಜಾತ್ಯಾತೀತ ಜನತಾದಳ ಮುಂದಿನ ದಿನಗಳಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಅಧಿಕಾರಕ್ಕೆ ಬರಲಿರುವ ಹಿನ್ನೆಲೆ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.