ಸೋಮವಾರಪೇಟೆಯಲ್ಲಿ ಕಮ್ಯೂನಿಸ್ಟ್ ಚಳುವಳಿಯ 100ನೇ ವರ್ಷಾಚರಣೆ

October 31, 2020

ಸೋಮವಾರಪೇಟೆ ಅ.31: ಭಾರತ ಕಮ್ಯೂನಿಸ್ಟ್ ಪಕ್ಷದ (ಮಾಕ್ರ್ಸ್‍ವಾದಿ-ಲೆನಿನ್ ವಾದಿ) ರೆಡ್ ಸ್ಟಾರ್ ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಕಮ್ಯೂನಿಸ್ಟ್ ಚಳುವಳಿಯ 100ನೇ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷದ ಪಾಲಿಟಿ ಬ್ಯೂರೋ ಸದಸ್ಯ ಆರ್. ಮಾನಸಯ್ಯ, ಶೋಷಿತರ ಪರ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಮ್ಯೂನಿಸ್ಟ್ ಚಳುವಳಿಯು ಆರಂಭವಾಗಿದ್ದು, ಪ್ರಾರಂಭದ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಳುವಳಿಯ ಕಾವು ಕಡಮೆಯಾಗಿದ್ದರಿಂದ ಸಮಾಜದಲ್ಲಿ ದಮನಿತರಿಗೆ ನ್ಯಾಯ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಚಳುವಳಿಗೆ ಇನ್ನಷ್ಟು ಚುರುಕು ಮುಟ್ಟಿಸುವಂತಾಗಬೇಕು ಎಂದರು.
ಮಾಕ್ರ್ಸ್ ಮತ್ತು ಲೆನಿನ್ ಅವರ ಹೋರಾಟದ ಕಿಚ್ಚಿನಿಂದ ಪ್ರಾರಂಭವಾದ ಕಮ್ಯೂನಿಸ್ಟ್ ಚಳುವಳಿ ನಡೆದುಬಂದ ಬಗೆ, ಹೋರಾಟದ ಸಾಧಕ-ಬಾಧಕಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ನಡೆಯಿತು.
100ನೇ ವರ್ಷಾಚರಣೆ ಅಂಗವಾಗಿ ವಿವಿಧ ಹಾಡಿಯ ಮಂದಿಯಿಂದ ಕಲಾ ಪ್ರಾಕಾರಗಳ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ, ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪವಿತ್ರ, ವನಜಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!