ಸೀ ಪ್ಲೇನ್ ನಲ್ಲಿ ಹಾರಾಡಿದ ಮೊದಲ ಪ್ರಧಾನಿ ಕೀರ್ತಿಗೆ ಮೋದಿ ಭಾಜನರು

31/10/2020

ಅಹ್ಮದಾಬಾದ್ ಅ.31 : ಸೀ ಪ್ಲೇನ್ ನಲ್ಲಿ ಹಾರಾಡಿದ ಮೊದಲ ಪ್ರಧಾನಿ ಕೀರ್ತಿಗೆ ನರೇಂದ್ರಮೋದಿ ಅವರು ಭಾಜನರಾಗಿದ್ದಾರೆ. ಗುಜರಾತಿನ ಸಬರ್‍ಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ಗುಜರಾತ್ ನಲ್ಲಿ ಆರಂಭವಾದ ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸೇವೆ ಇದಾಗಿದೆ.