ಪಡಿತರ ಚೀಟಿಗೆ ಸಿಗಲಿದೆಯಂತೆ ಈರುಳ್ಳಿ !

31/10/2020

ಮಡಿಕೇರಿ ಅ.31 : ಗೋವಾ ಸರ್ಕಾರ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಏಜೆನ್ಸಿಯಿಂದ 1,045 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿ 3.5 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಪೂರೈಸಲಿದೆ ಎಂದು ಹಿರಿಯ ಅಧಿಕಾರಿ ಶನಿವಾರ ತಿಳಿಸಿದ್ದಾರೆ. ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಕೆಜಿ. 32 ರೂ.ಗೆ ಈರುಳ್ಳಿ ನೀಡಲು ಸರ್ಕಾರ ನಿರ್ಧರಿಸಿದೆ.