ಹಾಲಿವುಡ್ ಬಾಂಡ್ ಸಿನಿಮಾದ ಹೀರೋ ಸೀನ್ ಕಾನರಿ ಇನ್ನಿಲ್ಲ

31/10/2020

ವಾಷ್ಟಿಂಗನ್ ಅ.31 : ಹಾಲಿವುಡ್ ಬಾಂಡ್ ಸಿನಿಮಾದ ಹೀರೋ ಸೀನ್ ಕಾನರಿ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.
90 ವರ್ಷದ ಸೀನ್ ಕಾನರಿ ಅವರು ಬಾಂಡ್ ಸರಣಿಯ 7 ಚಿತ್ರಗಳಲ್ಲಿ ಬಾಂಡ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಂಡ್ ಸರಣಿ ಮೊದಲ ಐದು ಚಿತ್ರಗಳಲ್ಲಿ ಸೀನ್ ಕನರಿ ನಟಿಸಿದ್ದರು.