ಸೋಮವಾರಪೇಟೆ ಪ.ಪಂ ಅಧ್ಯಕ್ಷ ಸ್ಥಾನ ಮೊಗೇರ ಸಮಾಜಕ್ಕೆ ಬೇಕು
01/11/2020

ಮಡಿಕೇರಿ ನ.1 : ಸೋಮವಾರಪೇಟೆ ಪ.ಪಂ ಅಧ್ಯಕ್ಷ ಸ್ಥಾನ ಮೊಗೇರ ಸಮಾಜಕ್ಕೆ ಬೇಕು ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಒತ್ತಾಯಿಸಿದೆ.
ಮಡಿಕೇರಿಯಲ್ಲಿ ಸಭೆ ನಡೆಸಿದ ಮೊಗೇರ ಸಮಾಜ ಈ ಬೇಡಿಕೆಯನ್ನು ಮುಂದಿಟ್ಟಿದೆ.
ಸೋಮವಾರಪೇಟೆ ಪ.ಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಈ ಸ್ಥಾನಕ್ಕೆ ಪ.ಪಂ ಸದಸ್ಯರಾದ ಮೊಗೇರ ಸಮಾಜದ ಪಿ.ಕೆ.ಚಂದ್ರು ಅವರು ಅರ್ಹರಾಗಿದ್ದಾರೆ. ಮೊಗೇರ ಸೇವಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚಂದ್ರು ಅವರು ವಿವಿಧ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದಾರೆ. ಪ್ರಸ್ತುತ ಜನಮನ್ನಣೆ ಪಡೆದು ಪ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರಿಗೇ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಜಿಲ್ಲೆಯಲ್ಲಿರುವ 38 ಸಾವಿರ ಮೊಗೇರ ಜನರ ಭಾವನೆಗೆ ಸ್ಪಂದಿಸಬೇಕೆಂಬ ಬೇಡಿಕೆಯ ನಿರ್ಣಯಕ್ಕೆ ಸಭೆಯಲ್ಲಿದ್ದವರು ಅನುಮೋದನೆ ನೀಡಿದರು.