ಸೋಮವಾರಪೇಟೆ ಪ.ಪಂ ಪಕ್ಷೇತರ ಸದಸ್ಯ ಬಿಜೆಪಿ ಗೆ ಸೇರ್ಪಡೆ

01/11/2020

ಮಡಿಕೇರಿ ನ.1 : ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದ ಬಿ.ಆರ್.ಶುಭಾಕರ್ ಬಿಜೆಪಿ ಗೆ ಸೇರ್ಪಡೆಗೊಂಡಿದ್ದಾರೆ.
ಶಾಸಕರ ಕಚೇರಿಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಅವರುಗಳ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ತಾ.ಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಪಕ್ಷದ ಪದಾಧಿಕಾರಿ ನಾಪಂಡ ಉಮೇಶ್, ಪ.ಪಂ ಸದಸ್ಯರುಗಳಾದ ನಳಿನಿಗಣೇಶ್, ಚಂದ್ರು, ಮಹೇಶ್, ಸೋಮೇಶ್, ಶರತ್ ಮತ್ತಿತರರು ಹಾಜರಿದ್ದರು.