ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನವರಿಗೆ ಸಿಂಹಪಾಲು

01/11/2020

ಮಡಿಕೇರಿ ನ.1 : ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನವರಿಗೆ ಸಿಂಹಪಾಲು ಲಭಿಸಿದೆ. ರಾಜ್ಯ ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ಪ್ರಕಟಿಸಿದ 2017, 2018 ಮತ್ತು 2019ನೇ ಸಾಲಿನ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನ ಮೂಲದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಶಸ್ತಿಗಳು ಲಭಿಸುವ ಮೂಲಕ ಜಿಲ್ಲೆಯ ಕೀರ್ತೀ ಪತಾಕೆ ಮತ್ತೊಮ್ಮೆ ರಾರಾಜಿಸಿದೆ. ಅದರಲ್ಲೂ ಹಾಕಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಒಲಿದಿರುವುದು ವಿಶೇಷವಾಗಿದೆ.
2017ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಪೆÇನ್ನಂಪೇಟೆಯ ಕಂಬೀರಂಡ ಪೆÇನ್ನಮ್ಮ(ಹಾಕಿ) ಭಾಜನರಾದರೆ, 2018ನೇ ಸಾಲಿನ ಏಕಲವ್ಯ ಪ್ರಶಸ್ತಿ ನಿಖಿನ್ ತಿಮ್ಮಯ್ಯ(ಹಾಕಿ) ಅವರಿಗೆ ಒಲಿದಿದೆ. 2019ನೇ ಸಾಲಿನ ಏಕಲವ್ಯ ಪ್ರಶಸ್ತಿ ಲೋಕೇಶ್ ತಿಮ್ಮಣ್ಣ(ಹಾಕಿ) ಅವರಿಗೆ ಲಭಿಸಿದೆ.
ಇನ್ನು ಜೀವಮಾನ ಸಾಧನೆಗಾಗಿನ ಪ್ರಶಸ್ತಿಗಾಗಿ ಸಿ.ಎ. ಕರುಂಬಯ್ಯ(ಹಾಕಿ) ಬೆಂಗಳೂರು ಹಾಗೂ 2018ರ ಕ್ರೀಡಾರತ್ನ ಪ್ರಶಸ್ತಿಗಾಗಿ ಸೋಮವಾರಪೇಟೆಯ ಬಿ.ಡಿ.ಲಾವಣ್ಯ(ಬಾಲ್ ಬ್ಯಾಡ್ಮಿಂಟನ್) ಅವರುಗಳು ಭಾಜನರಾಗಿದ್ದಾರೆ. ಏಕಲವ್ಯ ಪ್ರಶಸ್ತಿಯು ಏಕಲವ್ಯರ ಕಂಚಿನ ಪ್ರತಿಮೆ, 2 ಲಕ್ಷ ರೂ. ನಗದು, ಜೀವಮಾನ ಸಾಧನೆಯ ಪ್ರಶಸ್ತಿಯು ಫಲಕ, 1.50 ಲಕ್ಷ ರೂ. ನಗದು, ಕ್ರೀಡಾರತ್ನ ಪ್ರಶಸ್ತಿಯು ಫಲಕ, 1 ಲಕ್ಷ ರೂ. ನಗದು ಬಹುಮಾನ ಹೊಂದಿರುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.