ಮಡಿಕೇರಿಯ ಕುವೆಂಪು ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ

ಮಡಿಕೇರಿ ನ.1 : ನಗರದಲ್ಲಿರುವ ವಿಶ್ವ ಮಾನವ ಕುವೆಂಪು ಉದ್ಯಾನವನವನ್ನು ಉಳಿಸಿ ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕಿದೆ ಎಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯೂ ತಿಳಿಸಿದ್ದಾರೆ.
ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಅಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿ.ಪಂ ಸದಸ್ಯೆ ಹಾಗೂ ಕುವೆಂಪು ಪುತ್ಥಳಿ ದಾನಿ ಕೆ.ಪಿ.ಚಂದ್ರಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್. ಹಿತರಕ್ಷಣಾ ವೇದಿಕೆಯ ವಕೀಲ ಕುಜ್ಞು ಅಬ್ದುಲ್ಲಾ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಲಾಸಾಗರ್ ಅಕಾಡಮಿಯ ಅಧ್ಯಕ್ಷ ಅಬ್ದುಲ್ ಆಫೀಸ್ ಸಾಗರ್ ಅವರ ಅಕಾಲಿಕ ಮರಣಕ್ಕೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ, ಕಾರ್ಯದರ್ಶಿ ಮಿನಾಜ್ ಪ್ರವೀಣ್, ಸಂಘಟನಾ ಕಾರ್ಯದರ್ಶಿ ನಾಗೇಶ್, ಸುರೇಶ್ ಕುಮಾರ್, ಅಕ್ಷಿತ್ ಕುಮಾರ್, ರೂಪ, ದೀಕ್ಷಿತ್, ಸತೀಶ್ ಪೈ, ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್, ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಮನುಶಣೈ, ಪತ್ರಕರ್ತ ಶ್ರೀಧರ ಹೂವಲ್ಲಿ, ಅಂಬೆಕಲ್ ನವೀನ್, ಬೇಬಿ ಮ್ಯಾಥ್ಯೂ, ಬಿಆರ್‍ಸಿ ರಂಜಿತ್, ರಾಜೇಶ್ ರೈ, ಎಂ.ಇ.ಮೊಯಿದ್ದೀನ್ ಹಾಜರಿದ್ದರು. ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತ ಸ್ವಾಗತಿಸಿ ನಿರೂಪಿಸಿದರು.