ಕೊಡಗು ಪತ್ರಿಕಾ ಭವನ TRUST ನಿಂದ ಕನ್ನಡ ರಾಜ್ಯೋತ್ಸವ

November 1, 2020

ಮಡಿಕೇರಿ ನ.1 : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನುಶೆಣೈ ಅವರು ಧ್ವಜಾರೋಹಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೋಶಾಧಿಕಾರಿ ಎಂ.ಪಿ.ಕೇಶವಕಾಮತ್, ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ, ಪತ್ರಿಕಾ ಭವನದ ಸಿಬ್ಬಂದಿಗಳಾದ ಯಮುನ, ಸವಿತ, ರಾಜೇಶ್, ವರ್ತಕÀ ಅಶ್ರಫ್, ಪುಟಾಣಿಗಳಾದ ಮೌಲ್ಯ, ಚರಿತ, ತರುಣ್, ಕಾವೇರಿ ಮತ್ತಿತರರು ಹಾಜರಿದ್ದು ನಾಡಗೀತೆ ಹಾಡಿದರು.

error: Content is protected !!