ಕೊಡಗು ವಿಶ್ವ ಹಿಂದೂ ಪರಿಷದ್, ಬಜರಂಗದಳದಿಂದ 38ನೇ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ

02/11/2020

ಮಡಿಕೇರಿ ನ. 2 : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕೊಡಗು ಜಿಲ್ಲಾ ಶಾಖೆ ವತಿಯಿಂದ ಕೊರೋನಾ ಸೋಂಕಿತ ವ್ಯಕ್ತಿಯ ಶವ ಸಂಸ್ಕಾರ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ಹಾಗೂ ತಾಲ್ಲೂಕು ಸೇವಾ ಪ್ರಮುಖ ನಂದ ಕುಮಾರ್ ಬಿ. ಎಸ್. (ಗಣೇಶ್) ನೇತೃತ್ವದಲ್ಲಿ ನಗರದ ಹಿಂದೂ ರುದ್ರಭೂಮಿಯಲ್ಲಿ ಸೋಮವಾರಪೇಟೆ ಮೂಲದ ಕೋವಿಡ್ ಸೋಂಕಿತ ಮಹಿಳೆಯ(82) ಅಂತ್ಯಕ್ರಿಯೆಯನ್ನು ಅಗ್ನಿ ಸ್ಪರ್ಶ ನೀಡುವ ಮೂಲಕ ಮಾಡಲಾಯಿತು.
ಇಲ್ಲಿಯವರೆಗೆ ಒಟ್ಟು 38 ಕೋವಿಡ್ ಸೋಂಕಿತ ವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಸಿದೆ.
ಈ ಸಂದರ್ಭ ಕೊರೋನಾ ವಾರಿಯರ್ಸ್ ಕಾರ್ಯಕರ್ತರುಗಳಾದ ಪವನ್ ಮಕ್ಕಂದೂರು, ವಿನಯ್ ಕುಮಾರ್ , ಸತೀಶ್ ಸುಣ್ಣದಕೆರೆ, ಶಿವ ಮೂರ್ತಿ, ಚರಣ್ ಕುಮಾರ್ ಇದ್ದರು.