ಮೊಗೇರ ಸೇವಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಗೌತಮ್ ಶಿವಪ್ಪ ಆಯ್ಕೆ

November 2, 2020

ಮಡಿಕೇರಿ ನ. 2 : ಮೊಗೇರ ಸೇವಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಹರದೂರು ಗ್ರಾಮದ ಗೌತಮ್ ಶಿವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಬಾಲಭವನದಲ್ಲಿ ಸಮಾಜದ ನಿರ್ಗಮಿತ ಅಧ್ಯಕ್ಷ ಬಿ. ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊಗೇರ ಸಮಾದ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರದಾನ ಕಾರ್ಯದರ್ಶಿಯಾಗಿ ಮರಗೋಡಿನ ಪಿ.ಬಿ. ಜನಾರ್ಧನ್, ಖಜಾಂಚಿಯಾಗಿ ಕಗ್ಗೊಡ್ಲುವಿನ ರಾಜೇಶ್ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಬಿ.ಎಂ. ದಾಮೋದರ, ಪಿ.ಬಿ. ಸುರೇಶ್, ಜಿ. ಮೋಹನ್, ಎಂ.ಪಿ. ದೇವಪ್ಪ, ಸುಂದರಿ, ಸತೀಶ್, ಆನಂದ್, ಪಿ.ಬಿ. ಮಂಜು, ಪಿ.ಬಿ. ಸೋಮಯ್ಯ, ನಾಗೇಶ್ ಕುಮಾರ್, ಸೀತಾರಾಮ್ ಅವರನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಮಾಜದ ಸ್ಥಾಪಕಧ್ಯಕ್ಷ ಟಿ. ಸದಾನಂದ ಮಾಸ್ಟರ್ ಹಾಗೂ ಗೌರವಾಧ್ಯಕ್ಷ ಪಿ.ಎಂ. ರವಿ ನಡೆಸಿಕೊಟ್ಟರು.

ಸಭೆಯಲ್ಲಿ ಜಿಲ್ಲೆಯ ತಾಲ್ಲೂಕು, ಹೋಬಳಿ ಗ್ರಾಮ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!