ಬಲಿದಾನ ದಿವಸ್ ಅಂಗವಾಗಿ ಮಡಿಕೇರಿಯಲ್ಲಿ ರಕ್ತದಾನ ಶಿಬಿರ

02/11/2020

ಮಡಿಕೇರಿ ನ.2 : ಅಯೋಧ್ಯೆಯಲ್ಲಿನ ರಾಮ ಜನ್ಮ ಭೂಮಿಯಲ್ಲಿ ನಡೆದ ಕರಸೇವೆಯಲ್ಲಿ ಹುತಾತ್ಮರಾದ ರಾಮ್ ಮತ್ತು ಶರದ್ ಕೊಠಾರಿ ಸಹೋದರರ ನೆನೆಯುವ ಬಲಿದಾನ ದಿವಸ್ ಅಂಗವಾಗಿ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ -ಬಜರಂಗದಳದ ನೇತೃತ್ವದಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು.
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಬಜರಂಗದಳದ ಕಾರ್ಯಕರ್ತರು, ಸಂಘದ ವಿವಿಧ ಕ್ಷೇತ್ರಗಳ ಕಾರ್ಯಕರ್ತರು ಶ್ರೀ ರಾಮನ ಭಕ್ತರು ಪಾಲ್ಗೊಂಡು ರಕ್ತದಾನ ಮಾಡಿದರು.
ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯಲ್ಲಿ ಈಗಾಗಲೇ ಸಾಕಷ್ಟು ರಕ್ತ ಶೇಖರಣೆ ಇರುವ ಕಾರಣದಿಂದಾಗಿ 8 ಮಂದಿ ಅಗತ್ಯವಿರುವ ರಕ್ತವನ್ನು ನೀಡಿದರೆ, 60 ಮಂದಿ ಹೆಸರು ನೋಂದಾಯಿಸಿ ಅಗತ್ಯವಿದ್ದಾಗ ರಕ್ತ ನೀಡುವ ಪ್ರತಿಜ್ಞೆ ಮಾಡಿದರು.