ಉಗುರು ಸುತ್ತು ನಿವಾರಿಸುವ ಸುಲಭ ಮನೆಮದ್ದು

03/11/2020

ಉಗುರು ಸುತ್ತು ಸಮಸ್ಯೆ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ, ಈ ಸಮಸ್ಯೆಗೆ ಮನೆಯಲ್ಲಿಯೇ ಹಲವು ಮನೆಮದ್ದುಗಳನ್ನು ಕಂಡುಕೊಂಡು ಇದರಿಂದ ಪರಿಹಾರ ಪಡೆಯಬಹುದಾಗಿದೆ, ಹಳ್ಳಿಗಳಲ್ಲಿ ಉಗುರು ಸುತ್ತು ಸಮಸ್ಯೆಗೆ ಕೆಲವರು ಮನೆಮದ್ದುಗಳನ್ನು ಬಳಸಿ ಪರಿಹಾರ ಕಾಣುತ್ತಾರೆ.

ಈ ಉಗುರು ಸುತ್ತು ಸಮಸ್ಯೆ ಬಂದ್ರೆ ನಿದ್ರೇನೇ ಮಾಡೋಕೆ ಆಗೋದಿಲ್ಲ ಅಷ್ಟೊಂದು ನೋವು ಕೊಡುತ್ತದೆ, ಇದರಿಂದ ಯಾವಾಗ ಮುಕ್ತಿ ಪಡೆಯೋಣ ಅನ್ನೋ ಅಷ್ಟು ಕಠಿಣ ನೋವನ್ನು ಈ ಸಮಸ್ಯೆಯಿಂದ ಅನುಭವಿಸಬೇಕಾಗುತ್ತದೆ.

ಅಂತಹ ಸಮಸ್ಯೆಗೆ ನಿಂಬೆ ರಸದಲ್ಲಿ ಅಪರಂಜಿ ಸೊಪ್ಪನ್ನು ಅರೆದು ಉಗುರುಸುತ್ತು ಆಗಿರುವಂತ ಜಾಗಕ್ಕೆ ಕಟ್ಟಿ ಅಥವಾ ಒಂದು ನಿಂಬೆಹಣ್ಣನ್ನು ಉಗುರು ಸುತ್ತು ಆಗಿರುವಂತ ಬೆರಳಿನ ಸೈಜ್ ನಿಂಬೆಹಣ್ಣಿನಲ್ಲಿ ಹೋಗುವಷ್ಟು ಒಂದು ಚಿಕ್ಕ ತೂತನ್ನು ಮಾಡಿ ಅದರಲ್ಲಿ ಬೆರಳನ್ನು ಇತ್ತು ಕೊಂಡರೆ ಕೆಲವೇ ದಿನಗಳಲ್ಲಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗುವುದು.

ಬೇವಿನ ಎಲೆಯನ್ನು ಮತ್ತು ಅಗಸೆ ಬೀಜವನ್ನು ಪೇಸ್ಟ್‌ ಮಾಡಿ ಬಿಸಿ ಮಾಡಿ ಉಗುರು ಸುತ್ತು ಆದ ಬೆರೆಳಿಗೆ ಲೇಪ ಮಾಡಿ ಕಟ್ಟಿದರೆ ತಕ್ಷ ಣ ನೋವು ಕಡಿಮೆಯಾಗುತ್ತದೆ.

ಅಕ್ಕಿ ಹಿಟ್ಟನ್ನು ಅಗಸೆ ಎಣ್ಣೆ ಜತೆ ಕಲಸಿ ಸ್ವಲ್ಪ ಬಿಸಿ ಮಾಡಿ ಲೇಪ ಮಾಡಿದರೆ ಉಗುರು ಸುತ್ತು ಗುಣವಾಗುತ್ತದೆ.

ಬೆರಳು ಊದಿದ್ದರೆ ನುಗ್ಗೆ ಸೊಪ್ಪನ್ನು ಸೈಂಧವ ಉಪ್ಪಿನ ಜತೆ ರುಬ್ಬಿ ಬೆರಳಿಗೆ ಕಟ್ಟಿದರೆ ಊತ ಬೇಗ ಕಡಿಮೆಯಾಗುತ್ತದೆ.

ಜೇಷ್ಠಮಧು ಪುಡಿಗೆ ಹಸುವಿನ ತುಪ್ಪ ಹಾಕಿ ಕಲಸಿ ಉಗುರು ಸುತ್ತು ಇರುವ ಬೆರಳಿಗೆ ಲೇಪ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.

ಅರಿಶಿನ ಪುಡಿಯನ್ನು ಬೇವಿನ ಎಣ್ಣೆ ಜತೆ ಕಲಸಿ ಬೆರಳಿಗೆ ಲೇಪ ಮಾಡಿದರೂ ಪ್ರಯೋಜನವಿದೆ.

-ಉಗುರು ಸುತ್ತು ಇರುವ ಬೆರಳಿಗೆ ಉನ್ಮತ್ತಿ ಎಲೆಗೆ ಜೇನುತುಪ್ಪ ಹಚ್ಚಿ ಬೆರಳಿಗೆ ಕಟ್ಟಿದರೆ ಬೆರಳಿನಲ್ಲಿ ಇರುವ ಕೀವು ಹೊರ ಬಂದು ನೋವು, ಊತ ಕಡಿಮೆಯಾಗುತ್ತದೆ.

ಉಗುರುಸುತ್ತು ಇರುವ ಬೆರಳಿಗೆ ವಿಳ್ಳೇದೆಲೆಯನ್ನು ಬಿಸಿ ಮಾಡಿ ಕಟ್ಟಿದರೆ, ಬೇಗನೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲದೆ ಬೇವಿನ ಎಲೆಯನ್ನು ಮತ್ತು ಅಗಸೆ ಬೀಜವನ್ನು ಪೇಸ್ಟ್‌ ಮಾಡಿ ಬಿಸಿ ಮಾಡಿ ಉಗುರು ಸುತ್ತು ಆದ ಬೆರೆಳಿಗೆ ಹಚ್ಚಿ ಬಟ್ಟೆ ಕಟ್ಟಿದರೆ ತಕ್ಷ ಣ ನೋವು ಕಡಿಮೆಯಾಗುತ್ತದೆ.