ಕುಶಾಲನಗರ ಪ.ಪಂ ಅಧ್ಯಕ್ಷ ಸ್ಥಾನ ಬಿಜೆಪಿಗೆ : ಜೆಡಿಎಸ್ ಗೆ ಉಪಾಧ್ಯಕ್ಷ ಸ್ಥಾನ

03/11/2020

ಮಡಿಕೇರಿ ನ. 3 : ಕುಶಾಲನಗರ ಪ.ಪಂ ಅಧ್ಯಕ್ಷ ಸ್ಥಾನ ಬಿಜೆಪಿಯ ಜಯವರ್ಧನ್ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ನ ಸುರಯ್ಯ ಬಾನು ಅವರ ಪಾಲಾಗಿದೆ.
ಆರು ಸ್ಥಾನಗಳನ್ನು ಹೊಂದಿದ್ದ ಬಿಜೆಪಿಗೆ ಮೂರು ಸ್ಥಾನಗಳ ಜೆಡಿಎಸ್ ಬೇಷರತ್ ಬೆಂಬಲ ಸೂಚಿಸಿತು. ಕಾಂಗ್ರೆಸ್ ಪಕ್ಷ ಅಧಿಕಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿತ್ತಾದರೂ ಬಿಜೆಪಿ ತಂತ್ರಗಾರಿಕೆ ಎದುರು ಅದು ವಿಫಲವಾಯಿತು. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೂಡ ಮತ ಚಲಾಯಿಸಿದರು.