ಕೃಷಿ ಸಾಲ ಬಡ್ಡಿ ರಿಯಾಯಿತಿ : ಸರ್ಕಾರದ ಸುತ್ತೋಲೆಗೆ ಆಕ್ಷೇಪ : ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ನಿರ್ಣಯ

03/11/2020

ಮಡಿಕೇರಿ ನ.3 : ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಬಡ್ಡಿ ರಿಯಾಯಿತಿ ವಿತರಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಕ್ಷೇಪ ವ್ಯಕ್ತಪಡಿಸಿದೆ. ಮಾರ್ಗಸೂಚಿಗಳು ಸಮಂಜಸವಾಗಿಲ್ಲದ ಕಾರಣ ಮರು ಪರಿಶೀಲನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಬ್ಯಾಂಕ್‍ನ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕೊಡವ ಸಮಾಜದ ಸಭಾಂಗಣದಲ್ಲಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ 95ನೇ ವಾರ್ಷಿಕ ಮಹಾಸಭೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ಸರ್ವ ಸದಸ್ಯರು ನಿರ್ಧರಿಸಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯದ ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಬಡ್ಡಿದರ ಅನ್ವಯವಾಗುವಂತೆ ಕೃಷಿ ಸಾಲ ವಿತರಿಸುವ ಸಂಬಂಧ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸುವುದಕ್ಕೆ ಸರ್ಕಾರ ಹಲವಾರು ನಿಯಮಗಳನ್ನು ತಂದಿದೆ. ಈ ನಿಮಯಗಳು ಕ್ರಮಬದ್ದವಾಗಿರದ ಕಾರಣ ನಿಯಮದಲ್ಲಿ ಸಡಿಲಿಕೆ ತರಬೇಕಿದೆ. ಈ ಕಾರಣದಿಂದ ಆದೇಶದ ಮರುಪರಿಶೀಲನೆ ಆಗಬೇಕು ಎಂದು ಸಭೆಯಲ್ಲಿ ಹಲವು ಸದಸ್ಯರಿಂದ ಒತ್ತಾಯ ಕೇಳಿಬಂತು.
ದಿನಾಂಕ 15-10-2020ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಕೃಷಿಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಾಲನೀಡಲು ಹಲವಾರು ನಿಮಯಮಗಳನ್ನು ತಂದಿದೆ. ಮುಖ್ಯವಾಗಿ ಸಾಲ ಪಡೆಯುವ ರೈತನು ಕೃಷಿ ಜಾಗದಜೊರೆಗೆ ಆದಾರ್ ಕಾರ್ಡ್, ಪಡಿತರ ಚೀಟಿಯನ್ನು ನೀಡಬೇಕಿದೆ. ಇನ್ನು ಪಡಿತರ ಚೀಟಿಯಲ್ಲಿನ ಸದಸ್ಯರು 1-4-2004ರಿಂದ ಸಾಲ ಪಡೆದು ಈಗಾಗಲೆ ರೂ. 4 ಲಕ್ಷ ಬಡ್ಡಿ ಸಹಾಯಧನ ಪಡೆದಿದ್ದಾರೆ.ಅಂತಹ ಕುಟುಂಬದ ಯಾವುದೇ ಸದಸ್ಯನಿಗೆ ರೀಯಾಯಿತಿ ಬಡ್ಡಿ ದರದ ಸಾಲ ಅನ್ವಯವಾಗುವುದಿಲ್ಲ.
ಇದಕ್ಕೆ ಬೇಕಾದ ದಾಖಲಾತಿಗಳನ್ನು ಸಂಗ್ರಹಿಸುವುದು ಕೂಡ ಕಷ್ಟಸಾಧ್ಯ. ಆದ್ದರಿಂದ,ಹೊರಡಿಸಿರುವ ಆದೇಶದ ಬಗ್ಗೆ ಮರು ಪರಿಶೀಲನೆಯನ್ನು ಸರ್ಕಾರದ ಹಂತದಲ್ಲಿ ಕೈಗೊಳ್ಳಬೇಕಿದೆ ಎಂದು ಅಧ್ಯಕ್ಷ ಬಾಂಡ್ ಗಣಪತಿ ಆಗ್ರಹಿಸಿದರು.
ಇನ್ನು ಕುಟುಂಬದ ಸದಸ್ಯನಾದವನೂ, ಒಂದೇ ರೇಷನ್ ಕಾಡ್ರ್ನಲ್ಲಿದ್ದಾರೆ, ಆತ ಹೊಸ ರೇಷನ್‍ಕಾರ್ಡ್ ಪಡೆಯುವವರೆಗೂ ಸಾಲದ ಹಕ್ಕನ್ನು ಪಡೆಯಲು ಸಾಧ್ಯವಾಗಲ್ಲ. ಸಾಲ ನೀಡುವುದದಾರೂ, ಒಂದೇ ಕುಟುಂಬ ಎಂದು ಪರಿಗಣಿಸಿ ಸಾಲ ನೀಡಲಾಗುತ್ತಿದೆ. ಈ ಕಾರಣಗಳಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ರೈತರು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಪಡೆಯಲು ಸಾಧ್ಯವಾಗಲ್ಲ. ಈ ಸಂಬಂಧ ರೈತರು ಈಗಾಗಲೇ ಆಕ್ಷೇಪವ್ಯಕ್ತ ಪಡಿಸಿರುವ ಕಾರಣ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಸಭೆಯಗಮನಕ್ಕೆ ತಂದರು. ಶೇ.11 ರಂತೆ ಡಿವಿಡೆಂಡ್ ನೀಡಲು ಒಪ್ಪಿಗೆ 2019-20ನೇ ಸಾಲಿನ ಡಿಸಿಸಿ ಬ್ಯಾಂಕ್ ಒಟ್ಟು ಬ್ಯಾಂಕು ಗಳಿಸಿದ ಲಾಭಾಂಶದಿಂದ ಸದಸ್ಯರ ಸಹಕಾರ ಸಂಘಗಳಿಗೆ ಶೇ.11 ರಂತೆ ಡಿವಿಡೆಂಡ್ ನೀಡಲು ಬ್ಯಾಂಕಿನ ಮಹಾಸಭೆಯಲ್ಲಿ ಸರ್ವಸದಸ್ಯರು ಒಪ್ಪಿಗೆ ನೀಡಿದರು.
ಬ್ಯಾಂಕಿನ 100ನೇ ಸಂವತ್ಸರದ ಸಂಬಂಧ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸುಸಜ್ಜಿತ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಕಟ್ಟಡದ ಮಾದರಿಯ ಬಗ್ಗೆ ಪುರತತ್ವ ಇಲಾಖೆಗೆಕಳುಹಿಸಲಾಗಿದ್ದು, ಆಡಳಿತ ಅನುಮೋದನೆಗೆ ಪಡೆದು ಅಂದಾಜು 10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಬಾಂಡ್ ಗಣಪತಿ ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್‍ಪೂವಯ್ಯ, ನಿರ್ದೆಶಕ ಬಿ.ಕೆ.ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಪಟ್ರಪಂಡ ಬಿ.ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್‍ಕುಮಾರ್, ಎಸ್.ಬಿ. ಭರತ್ ಕುಮಾರ್, ಕನ್ನಂಡ ಎ. ಸಂಪತ್, ಕೋಲತಂಡ ಎ.ಸುಬ್ರಮಣಿ, ಕೆ. ಮನು ಮುತ್ತಪ್ಪ, ಕಿಮ್ಮುಡೀರ ಎ. ಜಗದೀಶ್, ಉಷಾ ತೇಜಸ್ವಿ, ಕೆ.ಅರುಣ್ ಭೀಮಯ್ಯ, ಎ. ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ. ಸಲೀಂಹಾಜರಿದ್ದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ವ್ಯವಸ್ಥಾಪಕರು ಹರೀಶ್ ಪೂವಯ್ಯ, ಕೋಡಿಪೂವಯ್ಯ, ಜಗದೀಶ್ ಹಾಜರಿದ್ದರು.