ಮಡಿಕೇರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ : ಬೈಕ್ ಚೋರ ಬಾಲಾಪರಾಧಿಗಳ ಬಂಧನ

04/11/2020

ಮಡಿಕೇರಿ ನ.4 : ಕೊಡಗು ಜಿಲ್ಲೆ, ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬೈಕ್ ಕಳವು ಮಾಡಿದ ಆರೋಪದಡಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕೊಡಗು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ, ಐದು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಇಬ್ಬರು ಬಾಲಕರನ್ನು ಬಾಲ ಅಪರಾಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ನಗರ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಪ್ರವಾಸಿ ಮಂದಿರದ ಪಾಕಿರ್ಂಗ್ ಸ್ಥಳದಲ್ಲಿ ಅ.30ರಂದು ಸಿ.ಆರ್.ತಿಮ್ಮಯ್ಯ ಎಂಬವರು ನಿಲ್ಲಿಸಿದ್ದ ಟಿವಿಎಸ್ ಅಪಾಚೆ ಮೋಟಾರ್ ಬೈಕ್ ಕಳವಾಗಿದ್ದು, ಈ ಬಗ್ಗೆ ತಿಮ್ಮಯ್ಯ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಡಿವೈಎಸ್‍ಪಿ ಬಿ.ಪಿ.ದಿನೇಶ್ ಕುಮಾರ್, ಸಿಐ ಅನೂಪ್ ಮಾದಪ್ಪ ನೇತೃತ್ವದಲ್ಲಿ ರಚಿಸಿದ್ದ ತನಿಖಾ ತಂಡ ಇದೀಗ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ತನಿಖಾ ತಂಡವು ಕಳವು ನಡೆಸಿದ ಬಾಲಕರನ್ನು ಪತ್ತೆ ಹಚ್ಚಿ ಅವರು ಮಡಿಕೇರಿಯಲ್ಲಿ ಕಳವು ಮಾಡಿದ್ದ ಟಿವಿಎಸ್ ಅಪಾಚೆ ಮೋಟಾರು ಬೈಕ್ ಸೇರಿದಂತೆ ಬೆಂಗಳೂರು ಹಾಗೂ ಮಂಡ್ಯ ನಗರದಲ್ಲಿ ಮತ್ತು ಕೇರಳದ ಕಣ್ಣೂರಿನಲ್ಲಿ ಕಳುವು ಮಾಡಿದ್ದ ಒಟ್ಟು 5 ವಿವಿಧ ಕಂಪೆನಿಯ ಮೋಟಾರು ಬೈಕುಗಳನ್ನು ವಶಪಡಿಸಿಕೊಂಡಿದೆ.ವಶಪಡಿಸಿಕೊಂಡ ಬೈಕ್‍ಗಳ ಅಂದಾಜು ಮೌಲ್ಯ 2.25ಲಕ್ಷ ರೂ.ಗಳಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕರಾದ ಗೋವಿಂದ ರಾಜು, ಹೊನ್ನಪ್ಪ ಕೆ.ಜಿ., ಮೊಹಮ್ಮದ್, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ, ನಂದಕುಮಾರ್, ಎ.ಆರ್, ಮನು, ಭವಾನಿ ಪಾಲ್ಗೊಂಡಿದ್ದರು.
::: ಸಾರ್ವಜನಿಕರಿಗೆ ಸೂಚನೆ :::
ಆಪಾದಿತರು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಯಾವುದೇ ದ್ವಿ ಚಕ್ರ ವಾಹನದ ಲಾಕನ್ನು ತಮ್ಮಲ್ಲಿರುವ ಡೂಪ್ಲಿಕೇಟ್ ಮಾಸ್ಟರ್ ಕೀ ಸಹಾಯದಿಂದ ತೆಗೆದು ಕಳ್ಳತನ ಮಾಡುವುದರಲ್ಲಿ ನಿμÁ್ಣತರಾಗಿರುತ್ತಾರೆ. ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.