ಸಿದ್ದಾಪುರದಲ್ಲಿ ಎಐಟಿಯುಸಿ ಸಂಘಟನೆಯ ನೂರರ ವರ್ಷಾಚರಣೆ

04/11/2020

ಮಡಿಕೇರಿ ನ. 4 : ಎಐಟಿಯುಸಿ ಸಂಘಟನೆಯ 100ರ ವರ್ಷಾಚರಣೆಯನ್ನು ಸಿದ್ದಾಪುರದ ಎಐಟಿಯುಸಿ ವತಿಯಿಂದ
ಸಂಭ್ರಮದಿಂದ ಆಚರಿಸಲಾಯಿತು.
ಸಿದ್ದಾಪುರದ ಜಿಲ್ಲಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರವನ್ನು ವಕೀಲ ಕೆ.ವಿ.ಸುನಿಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, 1920ರಂದು ಮಹಾರಾಷ್ಟ್ರದ ಮುಂಬಾಯಿಯಲ್ಲಿ ಪ್ರಾರಂಭವಾದ ಎಐಟಿಯುಸಿ ಸಂಘಟನೆ ದುಡಿಯುವ ವರ್ಗದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್ ಮೊದಲ ಅಧ್ಯಕ್ಷರಾಗಿದು,್ದ ನಂತರದ ದಿನಗಳಲ್ಲಿ ಹೆಸರಾಂತ ನಾಯಕರನ್ನೊಳಗೊಂಡ ಸಂಘಟನೆ ಸಕ್ರಿಯವಾಗಿತೊಡಗಿಸುವ ಮೂಲಕ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದರು.
ಸತತ ನೂರು ವರ್ಷಗಳಿಂದ ಕಾರ್ಮಿಕರ ಪರವಾಗಿ ಹೋರಾಟ ರೂಪಿಸಿದರ ಭಾಗವಾಗಿ ಹಲವು ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಘಟನೆ ಯಶಸ್ವಿಯಾಗಿದೆ ಎಂದರು.
ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರಿಗೆ ಮಾರಕವಾಗುವ ಕಾನೂನುಗಳನ್ನು ಜಾರಿಗೆತಂದಿದ್ದು, ಇದರ ವಿರುದ್ಧ ಎಐಟಿಯುಸಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟನೆಯೊಂದಿಗೆ ಕೈ ಜೋಡಿಸುವ ಮೂಲಕ ಬಲಪಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ, ಶಾಖಾ ಕಾರ್ಯದರ್ಶಿ ಕುಮಾರ್, ಎಐವೈಫ್ ಜಿಲ್ಲಾಧ್ಯಕ್ಷ ರಫೀಕ್ ನವಲಗುಂದ, ಪ್ರಮುಖರಾದ ರಮೇಶ್ ಮಾಯಮುಡಿ, ಗಣೇಶ್ ರಾಬಿನ್, ಸೀತಾರಾಮ್, ಕಟ್ಟಡ ಕಾರ್ಮಿಕರ ಸಂಘಟನೆಯ ಕೃಷ್ಣಕರಡಿಗೋಡು, ಪುಷ್ಪಾಮಣಿ, ಪೂಜಾ ಸೇರಿದಂತೆ ಹಲವರು ಹಾಜರಿದ್ದರು.