ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ್‍ಗೆ ಸ್ಥಾನ

04/11/2020

ಮಡಿಕೇರಿ ನ. 4 : ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ.ಮಂಜುನಾಥ್ ಅವರು 2019 ನೇ ಸಾಲಿನ ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಯುಎಸ್‍ಎ ಸ್ಟ್ಯಾನ್ಬೋರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ಅನಲೈಟಿಕಲ್ ಕೆಮೆಸ್ಟ್ರಿ ಮತ್ತು ಎನರ್ಜಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಪ್ರಪಂಚದ ಅಗ್ರ ಶೇ.2 ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿರುತ್ತಾರೆ. ಡಾ.ಜೆ.ಜಿ.ಮಂಜುನಾಥ ಅವರು ಈವರೆಗೆ 93 ಅಂತರಾಷ್ಟ್ರೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಪ್ರಸುತ್ತ 7 ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.