ಪ್ರೀಮಿಯರ್ ಲೀಗ್ ಕ್ರಿಕೆಟ್ : ನಗದು ಗೆದ್ದ ಬೇತ್ರಿಯ ಯುವಕ ರಫೀಕ್

ಮಡಿಕೇರಿ ನ.4 : ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಆಟವನ್ನು ನೋಡುತ್ತಾ ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲಿ ಬೇತ್ರಿಯ ಯುವಕ ಬಿ.ವೈ.ರಫೀಕ್ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನ.3 ರಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ ಹೈದರಾಬಾದ್ ನಡುವಿನ ಪಂದ್ಯಾಟದಲ್ಲಿ ಐಪಿಎಲ್ ಡ್ರೀಮ್ ಇಲೆವೆನ್ ತಂಡವನ್ನು ಸರಿಯಾಗಿ ಊಹಿಸುವ ಮೂಲಕ ರಫೀಕ್ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ವಿಶ್ವದಾದ್ಯಂತ ಡ್ರೀಮ್ ಇಲೆವೆನ್ ಸ್ಪರ್ಧೆಯಲ್ಲಿ 60 ಲಕ್ಷಕ್ಕೂ ಅಧಿಕ ಕ್ರಿಕೆಟ್ ಪ್ರಿಯರು ಭಾಗವಹಿಸಿ ಮೊದಲ ಬಹುಮಾನ ರೂ.1 ಕೋಟಿಯನ್ನು ವಿಶ್ವದ 16 ಮಂದಿ ಗೆದ್ದಿದ್ದು, ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಇದರಲ್ಲಿ ಕೊಡಗು ಜಿಲ್ಲೆಯ ಬೇತ್ರಿಯ ವರ್ತಕ ಬಿ.ವೈ.ರಫೀಕ್ ಅವರೂ ಸೇರಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳಿಂದ ಒಟ್ಟು 11 ಆಟಗಾರರನ್ನು ಡ್ರೀಮ್ ಇಲೆವೆನ್ ತಂಡಕ್ಕೆ ಆಯ್ಕೆ ಮಾಡುವ ಸವಾಲಿತ್ತು. ನಾಯಕನಾಗಿ ಡೇವಿಡ್ ವಾರ್ನರ್ ಹಾಗೂ ಉಪ ನಾಯಕನಾಗಿ ವೃದ್ಧಿಮಾನ್ ಶಾ ಒಳಗೊಂಡಂತೆ ಡ್ರೀಮ್ ಇಲೆವೆನ್ ತಂಡವನ್ನು ಬೇತ್ರಿಯ ರಫೀಕ್ ಆಯ್ಕೆ ಮಾಡಿ ಸುಮಾರು ರೂ.6.25ಲಕ್ಷ ರೂ.ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
