ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿಗೆ ಮೊಗೇರ ಸಮಾಜದಿಂದ ಸನ್ಮಾನ

04/11/2020

ಮಡಿಕೇರಿ ನ.4 : ಕೊಡಗು ಜಿಲ್ಲೆಯಿಂದ ಪ್ರಥಮ ಬಾರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ಮೊಗೇರ ಸಮಾಜದ ಗೌರವಾಧ್ಯಕ್ಷ ಹಾಗೂ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅವರನ್ನು ಮೊಗೇರ ಸೇವಾ ಸಮಾಜದ ವತಿಯಿಂದ ನಗರದ ಬಾಲಭವನದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಂ.ರವಿ ಮುಂದಿನ ದಿನಗಳಲ್ಲಿ ತುಳು ಅಕಾಡೆಮಿಯ ಪ್ರತಿಯೊಂದು ಕಾರ್ಯಕ್ರಮ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಮೊಗೇರ ಸಮಾಜ ಸಂಪೂರ್ಣ ಸಹಕಾರ ನೀಡಬೇಕೆಂದರು ಮನವಿ ಮಾಡಿದರು. ತಮ್ಮನ್ನು ಗುರುತಿಸಿ ಸದಸ್ಯ ಸ್ಥಾನ ನೀಡಿದ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು.
ಮೊಗೇರ ಸಮಾಜದ ಪ್ರಮುಖರು ಮಾತನಾಡಿ ಪಿ.ಎಂ.ರವಿ ಅವರ ಕಾರ್ಯಕ್ಷಮತೆ ಮತ್ತು ಸಂಘಟನಾ ಶ್ರಮದ ಬಗ್ಗೆ ಕೊಂಡಾಡಿದರು. ಅಕಾಡೆಮಿಯ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾಜದ ಸ್ಥಾಪಕ ಅಧ್ಯಕ್ಷ ಟಿ.ಸದಾನಂದ ಮಾಸ್ಟರ್, ನಿಕಟ ಪೂರ್ವ ಅಧ್ಯಕ್ಷ ಬಿ.ಶಿವಪ್ಪ, ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಪಿ.ಬಿ.ಜನಾರ್ಧನ್, ಖಜಾಂಚಿ ರಾಜೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಎಂ.ದಾಮೋದರ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಜಿ.ಮೋಹನ್, ಸಮಿತಿ ಸದಸ್ಯರುಗಳಾದ ಎಂ.ಪಿ.ದೇವಪ್ಪ, ಸುಂದರಿ, ಸತೀಶ್, ಸೋಮಯ್ಯ, ಆನಂದ್, ಪಿ.ಬಿ.ಮಂಜು, ನಾಗೇಶ್ ಕುಮಾರ್, ಸೋಮನಾಥ್, ಸೀತಾರಾಮ್ ಸೇರಿದಂತೆ ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.