ವಿವಾಹಕೋಸ್ಕರ ಮತಾಂತರ ನಿಷೇದ ಕಾಯ್ದೆ ತಕ್ಷಣ ಜಾರಿಗೆ : ಟಿ.ಎಂ.ಶಾಹೀದ್ ಆಗ್ರಹ

04/11/2020

ಮಡಿಕೇರಿ ನ. 4 : ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ವಿವಾಹಕೋಸ್ಕರ ಮತಾಂತರ ನಿಷೇದ ಕಾಯ್ದೆ ಯನ್ನು ಕಾನೂನು ತಜ್ಞರ ಸಲಹೆಯೊಂದಿಗೆ ಸಾಮಾಜಿಕ, ಧಾರ್ಮಿಕ ಮುಖಂಡರುಗಳ ಸಲಹೆಯನ್ನು ಪಡೆದು ಎಲ್ಲಾ ಜಾತಿಯವರಿಗೆ ಅನುಕೂಲವಾಗುವಂತ ಕಾನೂನನ್ನು ಸಂವಿಧಾನದ ಚೌಕಟ್ಟಿನ ಒಳಗೆ ಜಾರಿಗೆ ತರಬೇಕೆಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಾಹೀದ್ ತೆಕ್ಕಿಲ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಸರಕಾರ ಇದರ ಒಳಿತು ಕೆಡುಕುಗಳ ಬಗ್ಗೆ ತಿಳಿದು ಕಾನೂನು ಜಾರಿಮಾಡಬೇಕು. ಯಾವುದೇ ದಬ್ಬಾಳಿಕೆ ಮಾಡದೆ ಸಮಾಜದಲ್ಲಿ ಶಾಂತಿ ಮತ್ತು ಸೌರ್ಹಾದ ಸಮಾಜ ಗೋಸ್ಕರ ಜಾರಿ ಮಾಡಬೇಕು ಹೊರತು ಯಾರ ಒತ್ತಡ ದಿಂದ ಅಗಬಾರದೆಂದರು. ಲವ್ ಜಿಹಾದ್ ಬಗ್ಗೆ ಚರ್ಚೆ ಯಾಗುತ್ತಿದ್ದು, ಇದರ ಅಗತ್ಯ ವಿರುವುದಿಲ್ಲ. ಲವ್ ಜಿಹಾದ್ ಎಂಬುವುದು ಇಸ್ಲಾಂ ಧರ್ಮದಲ್ಲಿ ಇಲ್ಲ ಇದು ಸಂಘ ಪರಿವಾರದವರ ಸೃಷ್ಟಿ ಯಾಗಿದೆ. ಬಾಬ್ರಿ ಮಸೀದಿ ವಿವಾದದ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದಾಗಲು ಯಾವುದೇ ಮುಸಲ್ಮಾನ ತಕರಾರು ಎತ್ತದೆ ತೀರ್ಪ ನ್ನು ಗೌರವಿಸಿರುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ಎಸ್.ಡಿ.ಪಿ.ಐ. ಯನ್ನು ನಿಷೇದ ಮಾಡುತ್ತೇವೆಂದು ಹೇಳಿಕೆ ನೀಡಿದ್ದರು ಇದುವರೆಗೆ ನಿಷೇದ ಮಾಡಲಿಲ್ಲ. ಆದುದರಿಂದ ಪತ್ರಿಕೆ ಹೇಳಿಕೆಗೆ ಸೀಮಿತವಾಗದೆ ಸ್ವಸ್ತ ಸಮಾಜಕ್ಕಾಗಿ ಕೂಡಲೆ ವಿವಾಹಕೋಸ್ಕರ ಮತಾಂತರ ನಿಷೇದ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕೆಂದು ಟಿ.ಎಂ.ಶಾಹೀದ್ ತಿಳಿಸಿದರು.