ಮುಂದಿನ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ

05/11/2020

ನವದೆಹಲಿ ನ.5 : ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಕಾರಣದಿಂದ ಮುಂದೂಡಲ್ಪಟ್ಟಿರುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದಿನ ವರ್ಷ ಜ.31 ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಈ ಹಿಂದೆ ಜು.5 ರಂದು ಪರೀಕ್ಷೆ ನಿಗಧಿಯಾಗಿತ್ತು.
14 ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ಜುಲೈನಲ್ಲಿ ದೇಶಾದ್ಯಂತ 112 ನಗರಗಳಲ್ಲಿ ನಡೆಯಬೇಕಿತ್ತು. ಆದರೆ, ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ಈ ಪರೀಕ್ಷೆಯನ್ನು ಇದೀಗ ಮುಂದಿನ ವರ್ಷದ ಜನವರಿ 31 ರಂದು ನಡೆಸಲಾಗುವುದು ಎಂದು ನಿಶಾಂಕ್ ಹೇಳಿದ್ದಾರೆ.
ಸಾಮಾಜಿಕ ಅಂತರ ಮತ್ತಿತರ ಸುರಕ್ಷತಾ ಕ್ರಮಗಳೊಂದಿಗೆ 135 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪೆÇಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.