ಕೊಹ್ಲಿ ದಾಖಲೆ ಮುರಿದ ವಾರ್ನರ್

05/11/2020

ಬೆಂಗಳೂರು ನ.5 : ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನೂತನ ದಾಖಲೆಗಳು ನಿರ್ಮಾಣವಾಗುತ್ತಿರುತ್ತವೆ. ಅದೇ ರೀತಿ ಆ ದಾಖಲೆಗಳನ್ನು ಮತ್ತೊಬ್ಬರು ಮುರಿಯುವುದು ಸಹಜ. ಇದೀಗ ಕೊಹ್ಲಿಯ ದಾಖಲೆಯೊಂದನ್ನು ಡೇವಿಡ್ ವಾರ್ನರ್ ಪುಡಿಗಟ್ಟಿದ್ದಾರೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಭರ್ಬರಿ ಬ್ಯಾಟಿಂಗ್ ಮಾಡಿದ್ದು 500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ 6ನೇ ಬಾರಿಗೆ 500 ಪ್ಲಸ್ ರನ್ ಕಲೆ ಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐಪಿಎಲ್ ಒಟ್ಟಾರೆ ಆವೃತ್ತಿಯಲ್ಲಿ 5 ಬಾರಿ 500 ಪ್ಲಸ್ ರನ್ ಬಾರಿಸಿದ್ದರು.