ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ನ.7 ರಂದು ಚುನಾವಣೆ : ರೈತ ಮಿತ್ರ ಕೂಟದ ಮುನ್ನಡೆ

05/11/2020

ಮಡಿಕೇರಿ ನ.5 : 1939ರಲ್ಲಿ ಸ್ಥಾಪನೆಯಾದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2020-25ನೇ ಸಾಲಿನ ಆಡಳಿತ ಮಂಡಳಿಗೆ ನ.7 ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ಚುನಾವಣೆ ನಡೆಯಲಿದೆ.
ಒಂದು ಕಾಲದಲ್ಲಿ ಕೊಡಗಿನ ಏಲಕ್ಕಿ ಬೆಳೆಗಾರರ ಅತ್ಯಂತ ಪ್ರತಿಷ್ಠೆಯ ಸಹಕಾರ ಕ್ಷೇತ್ರವಾಗಿದ್ದ ಈ ಸಂಸ್ಥೆ ಇಂದು ವಿವಿಧ ವ್ಯವಹಾರಗಳ ಮೂಲಕ ಮುಂದೆ ಸಾಗುತ್ತಿದೆ. ಹಲವು ಹಿರಿಯರನ್ನು ಕಂಡಿರುವ ಸಂಘದ ಆಡಳಿತ ಮಂಡಳಿ ಚುನಾವಣೆ ಇಲ್ಲದೆಯೇ ನೇಮಕವಾಗುತ್ತಿದ್ದ ವರ್ಷಗಳೇ ಹೆಚ್ಚು. ಆದರೆ 2010 ರ ನಂತರ ಅಧಿಕಾರಕ್ಕಾಗಿ ಪೈಪೋಟಿ ಆರಂಭವಾಯಿತು.
ಪ್ರಸ್ತುತ ನಡೆಯುವ ಚುನಾವಣೆಯಲ್ಲಿ ಹಾಲಿ ನಿದೇಶಕ ಸೂದನ ಎಸ್. ಈರಪ್ಪ ಅವರ ನೇತೃತ್ವದ “ರೈತಮಿತ್ರ ಕೂಟ” ಹಾಗೂ ಮಾಜಿ ಅಧ್ಯಕ್ಷ ಬಿ.ಈ. ಬೋಪಯ್ಯ ಗುಂಪಿನ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಒಟ್ಟು 17 ಸ್ಥಾನಗಳನ್ನು ಹೊಂದಿರುವ ಸಂಘಕ್ಕೆ ಎಸ್.ಎಸ್.ಸುರೇಶ್, ಪೆಮ್ಮಂಡ ಟಿ.ಬೋಪಣ್ಣ ಹಾಗೂ ಕೋಣಿಯಂಡ ಡಿ.ಬೋಪಣ್ಣ, ವಿರಾಜಪೇಟೆ ತಾಲ್ಲೂಕಿನಿಂದ ಜಿಲ್ಲಾವಾರು ಃಇಒ(ಃ) ಅಭ್ಯರ್ಥಿ ಪೇರಿಯನ ಉದಯ, ಹಾಲಿ ನಿರ್ದೇಶಕ ಃಅಒ(ಂ) ಅಭ್ಯರ್ಥಿ ಬಿ.ಸಿ.ಚೆನ್ನಪ್ಪ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಐದು ಸ್ಥಾನಗಳನ್ನು “ರೈತಮಿತ್ರ ಕೂಟ” ಪಡೆದಂತಾಗಿದೆ.
ಪರಿಶಿಷ್ಟ ಜಾತಿಯ ಜಿಲ್ಲಾವಾರು ಅಭ್ಯರ್ಥಿ ಕುಡಿಯರ ಬೆಳ್ಯಪ್ಪ ಮತ್ತೊಂದು ಗುಂಪಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧಿಕಾರ ಪಡೆಯಲು 9 ಸ್ಥಾನಗಳ ಅಗತ್ಯವಿದ್ದು, ಮಿತ್ರಕೂಟ ಈಗಾಗಲೇ 5 ಸ್ಥಾನಗಳನ್ನು ಗಳಿಸಿದೆ. ಮತ್ತೊಂದು ಗುಂಪು ಒಂದು ಸ್ಥಾನವನ್ನು ಪಡೆದಿದೆ.
ಕಳೆದ ಅವಧಿಯಲ್ಲಿ ರೈತಮಿತ್ರ ಕೂಟದ ಸೂದನ ಈರಪ್ಪ ಅವರು ಅಧ್ಯಕ್ಷ ಸ್ಥಾನವನ್ನು ಲಾಟರಿ ಮೂಲಕ ಕಳೆದುಕೊಂಡಿದ್ದರು. ಈ ಬಾರಿ 24 ಮಂದಿ ಹೊಸ ಮುಖಗಳು ಸ್ಪರ್ಧಾ ಕಣದಲ್ಲಿದ್ದು, ಒಂದು ಗುಂಪಿನ ಆರು ಮಾಜಿ ನಿರ್ದೇಶಕರು ಹಾಗೂ ಮತ್ತೊಂದು ಗುಂಪಿನ ಮಾಜಿ ಅಧ್ಯಕ್ಷರೊಬ್ಬರು ಸ್ಪರ್ಧೆಯಲ್ಲಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಆರು ಮಂದಿಯಲ್ಲಿ ಃಇಒ(ಂ) ಯ ಬಿ.ಸಿ.ಚೆನ್ನಪ್ಪ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಹೊಸ ಮುಖಗಳು.
ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ಮೂರು ತಾಲ್ಲೂಕಿನ ಒಟ್ಟು 2,708 ಸದಸ್ಯರಿದ್ದು, ಅರ್ಹ ಮತದಾರರು 496, ಅನರ್ಹರು, ಅಪೂರ್ಣ ಶೇರುದಾರರು ಹಾಗೂ ಸುಸ್ತಿದಾರರು 2,212 ಆಗಿದ್ದಾರೆ.