ಮಡಿಕೇರಿಯಲ್ಲಿ ಗೃಹ ಸಚಿವರ ವಾಸ್ತವ್ಯ : ಶುಕ್ರವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ

05/11/2020

ಮಡಿಕೇರಿ ನ.5 : ರಾಜ್ಯ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರು ಮಡಿಕೇರಿ ಸಮೀಪದ ತಾಜ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕುಟುಂಬ ವರ್ಗ ಸಹಿತರಾಗಿ ಖಾಸಗಿ ಭೇಟಿ ನೀಡಿರುವ ಅವರು ಶುಕ್ರವಾರ ಮತ್ತು ಶನಿವಾರ ರೆಸಾರ್ಟ್‍ನಲ್ಲಿ ತಂಗಲಿದ್ದಾರೆ.
ರೆಸಾರ್ಟ್ ಹೊರಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುದ್ದಿ ಮಾದ್ಯಮ, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ತಾಜ್ ರೆಸಾರ್ಟ್ ಬಳಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು ಸಿಬಿಐ ತನಿಖೆ ಮಾಡುತ್ತಿದೆ, ಈ ಬಗ್ಗೆ ನಾನು ಏನೂ ಹೇಳಲ್ಲ ಎಂದಷ್ಟೇ ಪ್ರತಿಕ್ರಿಯೆ ನೀಡಿದರು. ಕೊಡಗು ಭೇಟಿ ಕುರಿತು ಮಾತನಾಡಿದ ಸಚಿವರು, ಕೊಡಗಿನ ಭೇಟಿ ಬಹಳ ಹಿಂದೆಯೇ ಆಗಬೇಕಿತ್ತು. ಈಗ ಕುಟುಂಬದ ಜತೆ ಬಂದಿದ್ದೇನೆ ಎಂದು ಹೇಳಿದರು.
ಶುಕ್ರವಾರ ಮಡಿಕೇರಿಯಲ್ಲಿ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸುತ್ತೇನೆ. ಕೇರಳ ಗಡಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.