ನಟಿ ಪೂನಂ ಪಾಂಡೆ ಬಂಧನ

06/11/2020

ಪಣಜಿ ನ.6 : ಸರ್ಕಾರಕ್ಕೆ ಸೇರಿದ ಪ್ರದೇಶಕ್ಕೆ ಅತಿಕ್ರಮಣ ಪ್ರದೇಶವೂ ಅಲ್ಲದೇ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ನಟಿ ಪೂನಂ ಪಾಂಡೆಯನ್ನು ಗೋವಾದಲ್ಲಿ ಪೆÇಲೀಸರು ಬಂಧಿಸಿದ್ದಾರೆ.
ಗೋವಾದ ಕೆನಕೋನಾ ಟೌನ್ ನಲ್ಲಿನ ಸರ್ಕಾರಿ ಯಂತ್ರವನ್ನು ಶೂಟಿಂಗ್ ಗೆ ಬಳಸಿಕೊಂಡಿರುವ ಆರೋಪ ನಟಿ ಪೂನಂ ಪಾಂಡೆ ವಿರುದ್ಧ ಕೇಳಿಬಂದಿದೆ.
ಕೆನಕೋನಾದ ನಾಗರಿಕರು ದೂರು ದಾಖಲಿಸಿದ ಬಳಿಕ ಪೆÇಲೀಸರು ಕ್ರಮ ಕೈಗೊಂಡಿದ್ದು, ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಪೆÇಲೀಸ್ ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.
ಪೂನಂ ಪಾಂಡೆಯನ್ನು ರಕ್ಷಿಸಿದ ಪೆÇಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಸಹ ಸ್ಥಳೀಯರು ಆಗ್ರಹಿಸಿದ್ದರು.