ಹಿಂದೂ ಯುವತಿ ಹತ್ಯೆ ಪ್ರಕರಣ : ಮಡಿಕೇರಿ, ವೀರಾಜಪೇಟೆಯಲ್ಲಿ ಪ್ರತಿಭಟನೆ

November 6, 2020

ಮಡಿಕೇರಿ ನ.6 : ಹರಿಯಾಣ ರಾಜ್ಯದ ಫರೀದಾಬಾದ್‍ನಲ್ಲಿ ತನ್ನನ್ನು ಪ್ರೀತಿಸಲು ನಿರಾಕರಿಸಿದ ಹಿಂದೂ ಯುವತಿಯನ್ನು ಹತ್ಯೆಗೈದ ವ್ಯಕ್ತಿಗೆ ಶಿಕ್ಷೆ ವಿಧಿಸಬೇಕು ಮತ್ತು ಲವ್ ಜಿಹಾದ್ ನಿಷೇಧಿಸಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಹಿಂದೂ ಜಾಗರಣ ವೇದಿಕೆಯ ಮಡಿಕೇರಿ ತಾಲೂಕು ಕಾರ್ಯಕರ್ತರು, ಹತ್ಯೆ ಮಾಡಿದ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲದೆ ಲವ್ ಜಿಹಾದ್ ಮಟ್ಟ ಹಾಕಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಪೊನ್ನಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ, ತಾಲೂಕು ಮಾತೃ ಸುರಕ್ಷಾ ಸಂಯೋಜಕ್ ಅರುಣ್ ಕಡಗದಾಳು, ತಾಲೂಕು ನಿಧಿ ಪ್ರಮುಖ್ ವಿಜು ಹರೀಶ್ ಮೇಕೇರಿ, ವಲಯ ಪ್ರಮುಖರು, ಬಜರಂಗದಳದ ಜಿಲ್ಲಾ ಸಂಯೋಜಕ್ ಚೇತನ್ , ವಿಧ್ಯಾರ್ಥಿ ಪ್ರಮುಖ್ ವಿನಯ್, ಬಿಜೆಪಿ ನಗರ ಅಧ್ಯಕ್ಷ ಮನು ಮಂಜುನಾಥ್, ನಗರ ಪ್ರಮುಖ್ ಜಗದೀಶ್ ಹಾಗೂ ತಾಲೂಕಿನ ವಿವಿಧ ಹಿಜಾವೇ ಘಟಕಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವೇದಿಕೆಯ ಪ್ರಮುಖರು ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ವೀರಾಜಪೇಟೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ಪ್ರಿನ್ಸ್ ಗಣಪತಿ ಅವರು, ಮತಾಂಧರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶ ವಿರೋಧಿ ಮತ್ತು ಹಿಂದು ವಿರೋಧಿ ನೀತಿಯೊಂದಿಗೆ ಸಮಾಜಘಾತುಕ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು
ಹಿಂದು ಜಾಗರಣ ವೇದಿಕೆ ಮತ್ತು ಸಂಘ ಪರಿವಾರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬಿ.ವಿ.ಹೇಮಂತ್, ಮೇವಡ ಅಯ್ಯಣ್ಣ, ಬಿ.ಎನ್.ಯೋಗೇಶ್, ಗಣೇಶ್ ಗೌಡ, ಅಂಜಪರವಂಡ ಅನಿಲ್, ಬೊಳ್ಳಚಂಡ ಪ್ರಕಾಶ್, ವಿವೇಕ್ ರೈ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಸದಸ್ಯರಾದ ಜೂನಾ, ಮಹದೇವ್ ಹಾಗೂ ತಾಲೂಕಿನ ಸಂಘ ಪರಿವಾರದವರು ಭಾಗವಹಿಸಿದ್ದರು.

error: Content is protected !!