ಕೊಡಗು ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷರಾಗಿ ರಶ್ಮಿ ಶೆಟ್ಟಿ ಆಯ್ಕೆ

06/11/2020

ಮಡಿಕೇರಿ ನ.6 : ಕೊಡಗು ರಕ್ಷಣಾ ವೇದಿಕೆಯ ಮಹಿಳಾ ಘಟಕ ನೂತನವಾಗಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ರಶ್ಮಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ವೇದಿಕೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ನೂತನ ಮಹಿಳಾ ಘಟಕವನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ಕುಸುಮ ಕಾವೇರಮ್ಮ, ಪ್ರಧಾನ ಕಾರ್ಯದರ್ಶಿ ಅನಿತಾ ತೆರೇಸಾ, ಖಜಾಂಚಿ ಡಿ.ರಾಣಿ, ಕಾರ್ಯದರ್ಶಿ ಪವಿತ್ರ ಹಾಗೂ ಸಂಘಟನಾ ಕಾರ್ಯದರ್ಶಿಯನ್ನಾಗಿ ವಿ.ಹೆಚ್.ನಾಗರತ್ನ ಅವರನ್ನು ನೇಮಕ ಮಾಡಲಾಯಿತು.
ನಿರ್ದೇಶಕರುಗಳಾಗಿ ಖುಷಿ ನಾಣಯ್ಯ, ಕೃಪಾ ಚಂಗಪ್ಪ, ಟೀನಾ ಬೆಳ್ಳಿಯಪ್ಪ, ಪ್ರೇಮಾ ಹಾಗೂ ಸುಚಿ ಪೆಮ್ಮಯ್ಯ ಅವರುಗಳು ಆಯ್ಕೆಯಾದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಹರೀಶ್, ನಿರ್ದೇಶಕರುಗಳಾದ ಪಾಪು ರವಿ, ಸುಲೈಮಾನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೆರ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.