ಸುಮನ ಅರಕಲಗೂಡು ರಚಿತ ‘ಪರಿಣಯ’ ಕವನಸಂಕಲನ ನ.8 ರಂದು ಬಿಡುಗಡೆ

November 6, 2020

ಸೋಮವಾರಪೇಟೆ ನ.6 : ಕಿರಗಂದೂರು ಗ್ರಾಮದ ಸುಮನ ಅರಕಲಗೂಡು ರಚಿತ ‘ಪರಿಣಯ’ ಕವನಸಂಕಲನ ಬಿಡುಗಡೆ ಕಾರ್ಯಕ್ರಮ ನ.8ರ ಭಾನುವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಗೌತಮ್ ಕಿರಗಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉದ್ಯಮಿ, ಸೇವಾರತ್ನ ಪ್ರಶಸ್ತಿ ಪುರಸ್ಕøತ ಹರಪಳ್ಳಿ ರವೀಂದ್ರ, ಬೆಂಗಳೂರು ಮುನ್ಸಿಪಲ್ ಡೇಟಾ ಸೊಸೈಟಿ ಜಂಟಿ ನಿರ್ದೇಶಕರಾದ ಕೆ.ಎಂ.ಜಾನಕಿ, ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಫೈಟರ್ ಗಿರೀಶ್ ಆರ್.ಗೌಡ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಹಾಸನ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಾಮಾಲಾ, ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಚ್.ಜೆ.ಜವರಪ್ಪ, ಅರಕಲಗೂಡು ತಾಲೂಕು ಅಧ್ಯಕ್ಷ ಎಂ.ಎಲ್.ವಿಷ್ಣುಪ್ರಕಾಶ್, ಸಾಹಿತಿಗಳಾದ ಪಿ.ಎಸ್.ವೈಲೇಶ್, ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗಶಾಸ್ತ್ರ ವಿಭಾಗದ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ನೇತ್ರಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ.ಕಿರಣ್‍ಭಟ್ ಭಾಗವಹಿಸಲಿದ್ದಾರೆ.

error: Content is protected !!