ಆಲೂರು ರಸ್ತೆಯಲ್ಲಿ ಗೂಡ್ಸ್ ಆಟೋ ಪಲ್ಟಿ : 12 ಕಾರ್ಮಿಕರಿಗೆ ಗಂಭೀರ ಗಾಯ

November 6, 2020

ಸೋಮವಾರಪೇಟೆ ನ.6 : ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಣಾವಾರ ಆಲೂರು ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಅರಕಲಗೂಡು ತಾಲೂಕಿನ ಮರಿಯನಗರ, ದೊಡ್ಡಬೊಮ್ಮನಹಳ್ಳಿ ಗ್ರಾಮದ ಮಂಜುಳ ರಾಜೇಗೌಡ, ಸಹನ ಅವರುಗಳು ತೀವ್ರಗಾಯಗೊಂಡಿದ್ದಾರೆ. ದರ್ಶನ್, ವಿಜಯ್, ಫಿಲೋಮಿನಾ, ರಾಜು, ನವೀನ್‍ಕುಮಾರ್, ಪ್ರೇಮ್‍ಕುಮಾರಿ, ಸ್ವಾಮಿ, ದರ್ಶನ್, ಗೀತ ಗಾಯಗೊಂಡವರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಲೂರು ಗ್ರಾಮದಲ್ಲಿ ಶುಂಠಿ ಕೀಳಲು ತೆರಗಳಲೆ ಗ್ರಾಮದ ಅನಿಲ್ ಎಂಬುವರ ಆಟೋ ದಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಚಾಲಕನ ಅತಿವೇಗ ಹಾಗು ಅಜಾಗರುಕತೆಯಿಂದ ಘಟನೆ ಸಂಭವಿಸಿದೆ ಎಂದು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಶ್ರೀಧರ್‍ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಟೋ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!