ನ. 8 ರಂದು “ಸ್ನೇಹಧಾರ ಮಾಸ” ಪತ್ರಿಕೆ ಬಿಡುಗಡೆ

November 7, 2020

ಮಡಿಕೇರಿ ನ. 7 : ಸಮಕಾಲೀನ ವಿಷಯಗಳಲ್ಲಿ ದಿಟ್ಟ ನಿಲುವುಗಳೊಂದಿಗೆ ಧಾರ್ಮಿಕ, ಶೈಕ್ಷಣಿಕ, ಕೌಟುಂಬಿಕ ವಿಷಯಗಳನ್ನೊಳಗೊಂಡು”ಸತ್ಯದೆಡೆಗೆ ದಿಟ್ಟ ಹೆಜ್ಜೆ” ಎಂಬ ಶೀರ್ಷಿಕೆಯಡಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಸಿಸಿ – ಕೊಡಗು ಸಮಿತಿಯ ಸಾರಥ್ಯದಲ್ಲಿ ಹೊರ ಬರುತ್ತಿರುವ “ಸ್ನೇಹಧಾರ” ನೂತನ ಕನ್ನಡ ಮಾಸ ಪತ್ರಿಕೆಯ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನ. 8 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 10 ಘಂಟೆಗೆ ಕುಶಾಲನಗರದ ಕ್ಯಾಸ್ಟಲ್ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್.ಜಿಲ್ಲಾ ಸಮಿತಿ ಹಾಗೂ ಜಿಸಿಸಿ ಕೊಡಗು ತಿಳಿಸಿದೆ.

ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ ಪ್ರಥಮ ಸಂಚಿಕೆಯನ್ನು ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ನ್ಯಾಯಾಧೀಶರಾದ ಲೋಕೇಶ್ ಕುಮಾರ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ ಹಿರಿಯ ವಕೀಲರಾದ ಹೆಚ್. ಎಸ್ ಚಂದ್ರಮೌಳಿ, ಐ.ಎನ್.ಟಿ.ಯುಸಿ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಯಾಕೂಬ್ ಕೆ. ಎ ಹಾಗೂ ಸದಸ್ಯರಾದ ಸಿ ಎಂ ಅಬ್ದುಲ್ ಹಮೀದ್ ಮೌಲವಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರಾದ ಇಸ್ಮಾಯಿಲ್ ಕಂಡಕೆರೆ ಎಂ.ಇ ಮುಹಮ್ಮದ್, ಪಟ್ಟಣ ಪಂಚಾಯತಿ ಸದಸ್ಯರಾದ ಕಲೀಮುಲ್ಲಾ, ಅಬ್ದುರಹ್ಮಾನ್ ಉಸ್ತಾದ್ ಗೋಣಿಕೊಪ್ಪ, ಇಸ್ಮಾಯಿಲ್ ಉಸ್ತಾದ್, ಉಮರ್ ಫೈಝಿ ಎಡಪಾಲ, ಇಕ್ಬಾಲ್ ಉಸ್ತಾದ್ ನೆಲ್ಲಿಹುದಿಕೇರಿ, ಆರಿಫ್ ಫೈಝಿ, ಬಶೀರ್ ಹಾಜಿ ಪೆರಂಬಾಡಿ ಹಾಗೂ ಎಸ್‌.ಕೆ..ಎಸ್‌.ಎಸ್.ಎಫ್ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಸಮಿತಿ ಹಾಗೂ ಜಿಸಿಸಿ – ಕೊಡಗು ಸಮಿತಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!